ವಿಜಯಸಾಕ್ಷಿ ಸುದ್ದಿ, ಗದಗ : ಇತ್ತೀಚಿನ ದಿನಗಳಲ್ಲಿ ಲಿಂಗ-ಜಾತಿ ಬೇಧದಿಂದ ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಮನುಷ್ಯ ಕುಲ ಒಂದೇ ಎಂದು ಸಾರುವ ಮೂಲಕ ಯಾರೂ ಮೇಲಲ್ಲ-ಕೀಳಲ್ಲ ಎಂದು ಸಾರಿದ ಬಸವಣ್ಣನವರು ಸಾಮರಸ್ಯದ ಬದುಕಿಗೆ ಭದ್ರ ಬುನಾದಿ ಹಾಕಿದ ಕಾರಣ ಜಗಜ್ಯೋತಿಯಾಗಿ ಕಾಣಿಸಿಕೊಂಡರು. ಈ ಹಿನ್ನೆಲೆಯಲ್ಲಿ ಸಾಮರಸ್ಯದ ಬದುಕಿಗೆ ಬಸವತತ್ವ ಪೂರಕ ಎಂದು ಸುಮಿತ್ರಾ ಶಿವಶಂಕರ ಕೋತಂಬರಿ ಅಭಿಪ್ರಾಯಪಟ್ಟರು.
ನಗರದ ಶಿವಬಸವ ನಗರದ ಶಿವಬಸವ ಸುಧಾರಣಾ ಸಮಿತಿ ಹಾಗೂ ಶಿವಬಸವ ನಗರ ಮಹಿಳಾ ಮಂಡಳದ ಆಶ್ರಯದಲ್ಲಿ ಶಿವಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಮಿತಿಯ ಗೌರವಾಧ್ಯಕ್ಷರಾದ ಎಂ.ಟಿ. ಸೋರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಶಿವಬಸವ ಸುಧಾರಣಾ ಸಮಿತಿ ಅಧ್ಯಕ್ಷ, ನ್ಯಾಯವಾದಿಗಳಾದ ಶಿವಶಂಕರ ಕೋತಂಬರಿ ಮಾತನಾಡಿ, ಸಮಾಜದ ಏಳ್ಗೆಗೆಗಾಗಿ ನಾವೆಲ್ಲಾ ಸಂಘಟನಾಶೀಲರಾಗಬೇಕು. ಸಂಘಟನೆ ಶಕ್ತಿಯು ಅಭಿವೃದ್ಧಿಗೆ ಸದಾ ಸಹಕಾರಿಯಾಗಬಲ್ಲದು. ಬಡಾವಣೆಯ ಒಗ್ಗಟ್ಟು ಅದು ಅಭಿವೃದ್ಧಿಯ ಸಂಕೇತ ಎಂದರು.
ಇನ್ನೋರ್ವ ಅತಿಥಿಗಳಾದ ಸಾಹಿತಿ ಐ.ಕೆ. ಕಮ್ಮಾರ ಮಾತನಾಡಿ ಸಮಾಜದ ಏಳ್ಗೆಗಾಗಿ ನಮ್ಮ ಬದುಕಿನ ಕೆಲವು ಸಮಯ ಮೀಸಲಾಗಿರಸಬೇಕೆಂದರು. ಬಸವೇಶ್ವರ ಭಾವಚಿತ್ರದ ಮೆರವಣಿಗೆ ಝಾಂಜ ಮೇಳದೊಂದಿಗೆ ಸಂಚರಿಸಿ ಕಾರ್ಯಕ್ರಮದ ವಿಶೇಷತೆ ಹೆಚ್ಚಿಸಿತು. ಮಕ್ಕಳಿಗಾಗಿ ಫ್ಯಾನ್ಸಿ ಡ್ರೆಸ್ ಹಾಗೂ ವಚನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ರಾಮಣ್ಣ ಮಡಿವಾಳರ, ಸಿದ್ದರಾಮಶೆಟ್ರು, ಶ್ರೀನಿವಾಸ ಮಿಣಜಗಿ, ಎಸ್.ಕೆ. ಇನಾಮದಾರ, ಬಸಣ್ಣ ಚೌಡಕಿ, ಜೋಗಿನ, ಪ್ರಭು ಬ್ಯಾಲಿಹಾಳ, ಶೇಖಪ್ಪಜ್ಜ ಕನ್ಯಾಳ, ಅಸೂಟಿ, ಎಸ್.ಪಿ. ಚಳಗೇರಿ, ಬಿ.ಬಿ. ಹಡಪದ, ಎಚ್.ಎನ್. ಕುರಿ, ಆರ್.ಎಂ. ಕ್ಯಾಮನಗೌಡ್ರ, ವಿಶ್ವನಾಥ ಹಿರೇಮಠ, ಎಸ್.ಎಸ್. ಗಡ್ಡದಮಠ, ಬಿ.ಸಿ. ಇಳಕಲ್ಲ, ನಿಂಗಪ್ಪ ಮಹಿಳಾ ಮಂಡಳದ ಸವಿತಾ ಗಡ್ಡದಮಠ, ರತ್ನಾ ಚಳಿಗೇರಿ, ಸೌಮ್ಯ ಅಸೂಟಿ, ರತ್ನಾ ಕನ್ಯಾಳ, ಮಲ್ಲಮ್ಮ ದಮಾಮಿ, ಕಾವ್ಯಾ ಹುಂಡೇಕರ, ಪೂಜಾ ಹಂಚಿನಾಳ, ಉಷಾ ಗುಡ್ಲಾನೂರ, ರೇಣುಕಾ ಕುಂಬಾರ, ಬಸಮ್ಮಾ, ಸಂಧ್ಯಾ ಬ್ಯಾಲಿಹಾಳ, ಗಂಗಾ ಪೊಲೀಸ್‌ಪಾಟೀಲ, ಸಂಗೀತ ಕಪಲಿ ಸೇರಿದಂತೆ ಬಡಾವಣೆಯ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಮಂಜುಳಾ ಹಡಪದ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಎಲ್ಲ ಧರ್ಮೀಯರನ್ನು ಸಮಾನವಾಗಿ ಕಾಣುವ ಮಹಾನ್ ಕನಸುಗಾರ ಬಸವಣ್ಣನವರು. ಅಂತಹ ಶರಣರ ಸ್ಮರಣೆ ತತ್ವಗಳ ಪರಿಪಾಲನೆ ಇಂದಿನ ಅಗತ್ಯ. ಬಸವ ಜಯಂತಿ ಆಚರಣೆ ಎಂದರೆ ಸಮಸ್ತ ಮನುಕುಲ ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕು. ಅವರ ತತ್ವಾದರ್ಶ ಪಾಲನೆ ಮಾಡುವ ಮುಖೇನ ಮನುಷ್ಯ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕೆಂದು ಸುಮಿತ್ರಾ ಕೋತಂಬರಿ ಹೇಳಿದರು.