ವಿಜಯಸಾಕ್ಷಿ ಸುದ್ದಿ, ಗದಗ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿ ಸಂಭ್ರಮಿಸುತ್ತಿರುವುದು ಸಂತೋಷ. ಆದರೆ, ಸ್ವಾತಂತ್ರ್ಯ, ಹಕ್ಕು, ಸಮಾನತೆಯನ್ನು ವಿಶ್ವಗುರು ಬಸವಣ್ಣವರು ನಮಗೆ ಅಂದೇ ಕೊಟ್ಟಾಗಿದೆ. ಅಂದಿನಿಂದ ಈ ಸಮಾನತೆಯನ್ನು ನಾವು ಹೆಮ್ಮೆಯಿಂದ ಅನುಭವಿಸುತ್ತಿದ್ದೇವೆ ಎಂದು ನಗರದ ಪ್ರಖ್ಯಾತ ಪ್ರವಚನಕಾರರಾದ ಗಿರಿಜಕ್ಕ ಧರ್ಮರಡ್ಡಿ ನುಡಿದರು.
ಗದಗ ಜಿಲ್ಲಾ ಮಹಿಳಾ ಪತಂಜಲಿ ಯೋಗ ಸಮಿತಿ ಆಶ್ರ‍್ರಯದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಗದಗ ಜಿಲ್ಲಾ ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿಗಳಾದ ಆಂಜನೇಶ ಮಾನೆ, ಪತಂಜಲಿ ಯೋಗ ಸಮಿತಿ ಖಜಾಂಚಿ ಕೆ.ಎಸ್. ಗುಗ್ಗರಿ, ಹಿರಿಯ ಯೋಗ ಶಿಕ್ಷಕಿ ಬಸಮ್ಮ ಹಡಗಲಿ, ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಮಹಿಳಾ ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಶೋಭಾ ಗುಗ್ಗರಿ ಮಾತನಾಡಿದರು.ಮಹಿಳಾ ಪತಂಜಲಿ ಯೋಗ ಸಮಿತಿಯಿಂದ ವರದಾನೇಶ್ವರಿ ಮಹಿಳಾ ಸಮಿತಿಯ ಶೈಲಾ ಖೋಡೆಕಲ್ ಹಾಗೂ ಸುರೇಖಾ ಪಿಳ್ಳಿಯವರನ್ನು ಶಾಲು ಹೊದೆಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುನಸಿಪಲ್ ಮೈದಾನದ ಕಕ್ಷೆಯವರು ಯೋಗಾಸನಗಳನ್ನೊಳಗೊಂಡ ನೃತ್ಯ ಪ್ರದರ್ಶನ ಮಾಡಿದರು. ನಾಗರತ್ನಾ ಬಡಿಗಣ್ಣವರ ಹಾಗೂ ಮಧು ಕೋಟಿಯವರು ಬವಿಕೆ ಹಾಡಿಗೆ ಪ್ರಾತ್ಯಕ್ಷಿಕೆಯೊಂದಿಗೆ ಅತ್ಯುತ್ತಮ ನೃತ್ಯ ಪ್ರದರ್ಶನ ಮಾಡಿ ಎಲ್ಲರ ಮನಸೆಳೆದರು. ಬಿ.ಪಿ ಹಾಗೂ ಮಧುಮೇಹಕ್ಕೆ ಸಂಬಂಧಿಸಿದಂತೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಕ್ಷೆಯವರು ನೃತ್ಯ ಪ್ರದರ್ಶನ ಮಾಡಿದರು. ಸ.ಹಿ.ಪ್ರಾ. ಶಾಲೆ ನಂ.4 ಕಕ್ಷೆಯವರು ಅತ್ಯುತ್ತಮ ನೃತ್ಯ ಪ್ರದರ್ಶನದೊಂದಿಗೆ ಜಾನಪದ ಹಾಡನ್ನು ಹಾಡಿದರು. ಸುಧಾ ಕೆರೂರ ತಂಡದವರು ಅತ್ಯುತ್ತದ ನೃತ್ಯ ಪ್ರದರ್ಶನ ಮಾಡಿದರು.
ಅತ್ಯುತ್ತಮ ಯೋಗ ಗೀತೆಯನ್ನು ರಚಿಸಿದ ಸದಾನಂದ ಕಾಮತರನ್ನು ಗೌರವಿಸಲಾಯಿತು. ಸುರೇಖಾ ಪಿಳ್ಳಿ ಪ್ರಾರ್ಥಿಸಿ ಸರ್ವರನ್ನು ಸ್ವಾಗತಿಸಿ ಪರಿಚಯಿಸಿದರು. ರತ್ನಾ ಬಡಿಗಣ್ಣವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಗದಗದಲ್ಲಿಯ ವಿವಿಧ ಯೋಗ ಕಕ್ಷೆಗಳಿಂದ ಎಲ್ಲ ಯೋಗ ಸಾಧಕರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಶಾರದಾ ಹಚಡದ ಮಾತನಾಡಿ, ಮಕ್ಕಳಿಗೆ ಮನೆಯಲ್ಲಿಯ ಸಂಸ್ಕೃತಿ ಮುಖ್ಯವಾಗುತ್ತೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ದೊರೆತರೆ ಒಳ್ಳೆಯ ಪ್ರಜೆಗಳಾಗುತ್ತಾರೆ. ಮಕ್ಕಳನ್ನು ತಿದ್ದಿ ಮೂರ್ತಿ ಮಾಡುವ ಕೆಲಸ ಶಿಕ್ಷಕರದ್ದಾಗಿರುತ್ತದೆ ಎಂದರು.
Advertisement