DC Vs RCB IPL 2025: ಬೆಂಗಳೂರಲ್ಲಿ ಕನ್ನಡಿಗನ ಆರ್ಭಟ: ತವರಲ್ಲೇ ಡೆಲ್ಲಿಗೆ ಶರಣಾದ ಆರ್ ಸಿಬಿ!

0
Spread the love

ಬೆಂಗಳೂರು:- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ IPL ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯವಾಗಿ ಸೋತಿದೆ.

Advertisement

ಕೆ.ಎಲ್‌.ರಾಹುಲ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಆರ್‌ಸಿಬಿ ವಿರುದ್ಧ ಡೆಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿತು. ಟಾಸ್‌ ಸೋತರೂ ಗೆಲುವಿನ ಛಲದೊಂದಿಗೆ ಬ್ಯಾಟಿಂಗ್‌ ನಡೆಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಆರಂಭದಲ್ಲೇ ಅಬ್ಬರಿಸಿತು. ಕೇವಲ 3 ಓವರ್‌ಗೆ 50 ರನ್‌ ಸಿಡಿಸಿ ಗಮನ ಸೆಳೆದಿತ್ತು. ಫಿಲ್‌ ಸಾಲ್ಟ್‌ 17 ಬಾಲ್‌ಗೆ 3 ಸಿಕ್ಸರ್‌ ಮತ್ತು 4 ಫೋರ್‌ ಚಚ್ಚಿ 37 ರನ್‌ ಗಳಿಸಿದ್ದರು. ಸಾಲ್ಟ್‌ ಅಬ್ಬರಕ್ಕೆ ಅಕ್ಷರಶಃ ಡೆಲ್ಲಿ ಬೌಲರ್‌ಗಳು ನಡುಗಿದ್ದರು. ಈ ಮಧ್ಯೆ 1 ರನ್‌ ಕದಿಯಲು ಹೋಗಿ ಸಾಲ್ಟ್‌ ರನೌಟ್‌ ಆಗಿ ಆಘಾತ ನೀಡಿದರು. ನಂತರ ಬಂದ ದೇವದತ್‌ ಪಡಿಕ್ಕಲ್‌ ಕೇವಲ 1 ರನ್‌ಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. ಈ ಮಧ್ಯೆ ಭರವಸೆ ಆಟಗಾರನಾಗಿದ್ದ ವಿರಾಟ್‌ ಕೊಹ್ಲಿ 2 ಸಿಕ್ಸರ್‌, 1 ಫೋರ್‌ನೊಂದಿಗೆ 22 ರನ್‌ ಗಳಿಸಿ ಔಟಾಗಿದ್ದು ನಿರಾಸೆ ಮೂಡಿಸಿತು.

ನಂತರ ಬಂದ ಯಾವೊಬ್ಬ ಬ್ಯಾಟರ್‌ ಕೂಡ ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ರಜತ್‌ ಪಾಟೀದಾರ್‌ 25 ರನ್‌ಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಕಡೆ ಮುಖ ಮಾಡಿದರು. ಲಿಯಾಮ್‌ ಲಿವಿಂಗ್‌ಸ್ಟೋನ್‌ 4, ಜಿತೇಶ್‌ ಶರ್ಮಾ 3 ರನ್‌ ಅಷ್ಟೇ ಗಳಿಸಿ ವಿಫಲರಾದರು. ಕೃಣಾಲ್‌ ಪಾಂಡೆ 18 ರನ್‌ ಗಳಿಸಿ ಔಟಾದರು. ಕೊನೆ ಘಳಿಗೆಯಲ್ಲಿ ಟಿಮ್‌ ಡೇವಿಡ್‌ ಎಂದಿನಂತೆ ತಮ್ಮ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. 20 ಬಾಲ್‌ಗೆ 4 ಸಿಕ್ಸರ್‌, 2 ಫೋರ್‌ನೊಂದಿಗೆ 37 ರನ್‌ ಗಳಿಸಿ ತಂಡವು ಸವಾಲಿನ ಮೊತ್ತ ಪೇರಿಸಲು ನೆರವಾದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗೆ 7 ವಿಕೆಟ್‌ ನಷ್ಟಕ್ಕೆ 163 ರನ್‌ ಗಳಿಸಿತು.

164 ರನ್‌ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭಿಕ ಆಘಾತ ಎದುರಿಸಿತು. ಕೇವಲ 10 ರನ್‌ ಗಳಿಸಿದ್ದಾಗಲೇ 2 ವಿಕೆಟ್‌ (ಫಾಫ್‌ ಡುಪ್ಲೆಸಿಸ್‌ 2, ಜೇಕ್ ಫ್ರೇಸರ್-ಮೆಕ್‌ಗುರ್ಕ್ 7 ರನ್) ಕಳೆದುಕೊಂಡಿತ್ತು. 30 ರನ್‌ ಹೊತ್ತಿಗೆ‌ 3 ವಿಕೆಟ್‌ ಬಿತ್ತು. 58 ರನ್‌ ಗಳಿಸಿದಾಗ 4 ವಿಕೆಟ್‌ ಉದುರಿದ್ದವು. ಹೀಗೆ ಆಡಿದರೆ ಗೆಲುವು ದಕ್ಕಿಸಿಕೊಳ್ಳಬಹುದೆಂದು ಭಾವಿಸಿದ್ದ ಆರ್‌ಸಿಬಿಗೆ ‌ ಕೆ.ಎಲ್.ರಾಹುಲ್‌ ತಲೆನೋವಾದರು. ಜವಾಬ್ದಾರಿಯುತ ಮತ್ತು ಏಕಾಂಗಿ ಹೋರಾಟ ನಡೆಸಿದ ರಾಹುಲ್‌ 53 ಬಾಲ್‌ಗೆ 6 ಸಿಕ್ಸರ್‌, 7 ಫೋರ್‌ನೊಂದಿಗೆ 93 ರನ್‌ ಕಲೆಹಾಕಿದರು. ಆರಂಭದಲ್ಲೇ ರಾಹುಲ್‌ ಕ್ಯಾಚನ್ನು ಪಾಟೀದಾರ್‌ ಕೈಚೆಲ್ಲಿದ್ದೇ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣವಾಯಿತು.


Spread the love

LEAVE A REPLY

Please enter your comment!
Please enter your name here