BBK 11: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಹಂಸಾ…!

0
Spread the love

ಬಿಗ್ ಬಾಸ್​ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದಾಗ ಹಂಸಾ ಅವರು ಸಾಕಷ್ಟು ಕಷ್ಟಪಟ್ಟಿದ್ದರು. ಸಾಧ್ಯವಾದಷ್ಟು ಗುರುತಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೂ ಕೂಡ ಅವರು ಎಲಿಮಿನೇಟ್​ ಆಗುವುದು ತಪ್ಪಲಿಲ್ಲ. ಸಾಮಾನ್ಯವಾಗಿ ಪ್ರತಿ ಭಾನುವಾರ ಎಲಿಮಿನೇಷನ್ ನಡೆಯುತ್ತದೆ. ಆದರೆ ಈ ಬಾರಿ ಸೋಮವಾರ ಎಲಿಮಿನೇಷನ್​ ಪ್ರತಿಕ್ರಿಯೆಯ ಪ್ರಸಾರ ಮಾಡಲಾಗಿದೆ.

Advertisement

ಹೌದು ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಆಕ್ಟೀವ್ ಆಗಿದ್ದ ನಟಿ ಹಂಸ ಅವರು ನರಕವಾಸಿ ರಂಜಿತ್ ಆಟದಿಂದ ಮನೆಯ ಕ್ಯಾಪ್ಟನ್ ಆಗಿದ್ದರು. ಈಗ ಅವರ ಆಟಕ್ಕೆ ಬ್ರೇಕ್ ಬಿದ್ದಿದೆ. ವಿಭಿನ್ನ ರೀತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಎರಡು ಕಾರ್ ಗಳು ಮನೆಗೆ ಎಂಟ್ರಿ ಕೊಟ್ಟಿದ್ದು, ಬಾಟಮ್ ಎರಡಲ್ಲಿ ಕಡೆಯದಾಗಿ ಹಂಸ, ಮೋಕ್ಷಿತಾ ಪೈ ಉಳಿದುಕೊಂಡಿದ್ದರು. 9 ಸ್ಪರ್ಧಿಗಳಲ್ಲಿ ಕಡೆಯದಾಗಿ ಇವರಿಬ್ಬರೂ ಉಳಿದುಕೊಂಡಿದ್ದರು.

ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಒಂದು ಕಾರಿನಲ್ಲಿ ಹಂಸ, ಮತ್ತೊಂದು ಕಾರಿನಲ್ಲಿ ಮೋಕ್ಷಿತಾ ಪೈ ಅವರನ್ನು ಕೂರಿಸಿಕೊಂಡು ಮನೆಯಿಂದ ಹೊರಗೆ ಹೋಯಿತು. ಸ್ವಲ್ಪ ಸಮಯ ಬಳಿಕ ಎಂಟ್ರಿ ಕೊಟ್ಟ ಕಾರಿನಲ್ಲಿ ಮೋಕ್ಷಿತಾ ಇದ್ದರು. ಅಲ್ಲಿಗೆ ಈ ವಿಭಿನ್ನ ಎಲಿಮಿನೇಷನ್ ನಲ್ಲಿ‌ ಹಂಸ ಔಟ್ ಆಗಿದ್ದಾರೆ ಅನ್ನೋದು ಅಧಿಕೃತವಾಯಿತು. ಈ ಎಲಿಮಿನೇಷನ್ ನಂತರ ಅಸಲಿ ಆಟ ಶುರು ಅಂತ ಮೋಕ್ಷಿತಾ ಸವಾಲು ಹಾಕಿದ್ದಾರೆ. ತನ್ನನ್ನು ಟಾರ್ಗೆಟ್ ಮಾಡೋರಿಗೆ ನಟಿ ಎಚ್ಚರಿಕೆ ನೀಡಿದ್ದಾರೆ.

 


Spread the love

LEAVE A REPLY

Please enter your comment!
Please enter your name here