‘ಬಿಗ್ ಬಾಸ್ ಕನ್ನಡ ಸೀಸನ್ 12’ ಈಗ ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಈ ಬಾರಿ ಟ್ರೋಫಿ ಯಾರ ಕೈ ಸೇರುತ್ತೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಪೀಕ್ ಮಟ್ಟ ತಲುಪಿದೆ. ಗಿಲ್ಲಿ ನಟ, ಕಾವ್ಯಾ ಶೈವ, ಅಶ್ವಿನಿ ಗೌಡ, ರಕ್ಷಿತಾ, ರಘು ಮತ್ತು ಧನುಶ್ — ಈ ಆರು ಮಂದಿ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ.
ಫಿನಾಲೆ ಹತ್ತಿರ ಬರುತ್ತಿದ್ದಂತೆ, ಹಳೆಯ ಸೀಸನ್ಗಳ ವಿನ್ನರ್ಗಳ ಚರ್ಚೆ ಮತ್ತೆ ಟ್ರೆಂಡ್ ಆಗಿದೆ. 2013ರಲ್ಲಿ ಆರಂಭವಾದ ಬಿಗ್ ಬಾಸ್ ಕನ್ನಡ ಮೊದಲ ಸೀಸನ್ನಲ್ಲಿ ವಿಜಯ್ ರಾಘವೇಂದ್ರ ವಿನ್ನರ್ ಆಗಿ ಇತಿಹಾಸ ಬರೆಯಿದ್ದರು. ಆ ಶೋ ಈಟಿವಿಯಲ್ಲಿ ಪ್ರಸಾರವಾಗಿ 98 ದಿನ ನಡೆದಿತ್ತು.
2014ರ ಸೀಸನ್ 2ರಲ್ಲಿ ಅಕುಲ್ ಬಾಲಾಜಿ ವಿನ್ನರ್ ಆಗಿ ಹೊರಹೊಮ್ಮಿದರು. 2015ರ ಸೀಸನ್ 3ರಲ್ಲಿ ಶ್ರುತಿ ವಿನ್ನರ್, ಚಂದನ್ ಕುಮಾರ್ ರನ್ನರ್ ಅಪ್ ಆಗಿದ್ದರು. ಸೀಸನ್ 4ರಲ್ಲಿ ಪ್ರಥಮ್ ವಿನ್ನರ್ ಆಗಿ ಭಾರಿ ಕ್ರೇಜ್ ಗಳಿಸಿಕೊಂಡರೆ, ಶೋ 112 ದಿನಗಳ ಕಾಲ ನಡೆದಿತ್ತು.
ಸೀಸನ್ 5ರಲ್ಲಿ ಚಂದನ್ ಶೆಟ್ಟಿ ವಿನ್ನರ್, ಸೀಸನ್ 6ರಲ್ಲಿ ಶಶಿಕುಮಾರ್ ವಿನ್ನರ್, ಸೀಸನ್ 7ರಲ್ಲಿ ಶೈನ್ ಶೆಟ್ಟಿ ವಿನ್ನರ್ ಆಗಿ ದಾಖಲೆ ಬರೆದರು. ಸೀಸನ್ 7 ಅನ್ನು ಬಿಗ್ ಬಾಸ್ ಇತಿಹಾಸದಲ್ಲೇ ಅತ್ಯುತ್ತಮ ಸೀಸನ್ ಎಂದು ಅಭಿಮಾನಿಗಳು ಇಂದಿಗೂ ನೆನಪಿಸುತ್ತಾರೆ.
ಸೀಸನ್ 8ರಲ್ಲಿ ಮಂಜು ಪಾವಗಡ ಟ್ರೋಫಿ ಗೆದ್ದರು. ಕೋವಿಡ್ ಕಾರಣದಿಂದ ಶೋ ಮಧ್ಯದಲ್ಲೇ ನಿಂತು ಮತ್ತೆ ಮುಂದುವರೆದದ್ದು ಇದೇ ಮೊದಲ ಬಾರಿ. ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿ, ಸೀಸನ್ 10ರಲ್ಲಿ ಕಾರ್ತಿಕ್ ಮಹೇಶ್, ಸೀಸನ್ 11ರಲ್ಲಿ ಹನುಮಂತ — ಈ ಮೂವರು ತಲಾ ಸೀಸನ್ಗಳ ವಿನ್ನರ್ ಆಗಿದ್ದಾರೆ.
ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಒಟ್ಟು 112 ದಿನಗಳ ಪ್ರಯಾಣ ಮುಗಿಸುತ್ತಿದ್ದು, ಜನವರಿ 18ರಂದು ಗ್ರ್ಯಾಂಡ್ ಫಿನಾಲೆಯಲ್ಲಿ ಹೊಸ ವಿನ್ನರ್ ಹೆಸರು ಇತಿಹಾಸದಲ್ಲಿ ಸೇರಲಿದೆ.



