ಬಿಬಿಎಂಪಿ ಕಸದ ಟೆಂಡರ್ ಕೊಡಿಸುವುದಾಗಿ ಮಹಿಳೆಗೆ ವಂಚನೆ: ಗುತ್ತಿಗೆದಾರನ ವಿರುದ್ಧ ದಾಖಲಾಯ್ತು FIR!

0
Spread the love

ಬೆಂಗಳೂರು:-ಬಿಬಿಎಂಪಿ ಕಸದ ಟೆಂಡರ್ ಕೊಡಿಸುವುದಾಗಿ ಮಹಿಳೆಗೆ ವಂಚನೆ ಎಸಗಿದ ಆರೋಪದಡಿ ಗುತ್ತಿಗೆದಾರನ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

Advertisement

ಹೇರೋಹಳ್ಳಿಯ ಸೌಭಾಗ್ಯ ಎಂಬುವವರಿಗೆ ವಂಚನೆ ಎಸಗಿದ್ದು, ಮಹಿಳೆ ದೂರಿನ ಅನ್ವಯ ಬಿಬಿಎಂಪಿ ಕಸದ ಗುತ್ತಿಗೆದಾರ ಹರೀಶ್ ವಿರುದ್ಧ ಕೇಸ್ ದಾಖಲಾಗಿದೆ.

ನಿಮ್ಮ ಬಳಿ ಇರುವ ಚಿನ್ನಾಭರಣ ಒತ್ತೆ ಇಟ್ಟು ಹಣ ತಂದು ಕೊಡಿ ಎಂದು ಮಹಿಳೆಗೆ ಹರೀಶ್ ಪುಸಲಾಯಿಸಿದ್ದ. ಅದರಂತೆ ಆತನ ಮಾತು ನಂಬಿ ಮಹಿಳೆಯು 90 ಗ್ರಾಂ ಚಿನ್ನವನ್ನು ಕೊಟ್ಟು ನೀವೆ ಒತ್ತೆ ಇಟ್ಟು ಹಣ ತಗೊಳಿ ಎಂದಿದ್ದಾರೆ. ಹಣ ಕೊಡುವಾಗ ಗೋಪಾಲ್ ಹಾಗೂ ಪಿಳ್ಳರಾಜು ಎಂಬುವರನ್ನ ಸಾಕ್ಷಿ ಇಟ್ಟು ಹಣ ಹಾಗೂ ಚಿನ್ನಾಭರಣವನ್ನು ಸೌಭಾಗ್ಯ ಕೊಟ್ಟಿದ್ದಾರೆ. ಆದರೆ ಎರಡು ವರ್ಷದಿಂದ ಹಣವೂ ಇಲ್ಲ, ಟೆಂಡರ್ ಇಲ್ಲದೆ ವಂಚನೆ ಮಾಡಿದ್ದಾರೆ. ಬಳಿಕ ಸೌಭಾಗ್ಯ ದೂರು ನೀಡಿದ್ದು, ಇದೀಗ ಗುತ್ತಿಗೆದಾರ ಹರೀಶ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here