BBMP ಗೇಟ್‌ ಬಿದ್ದು ಬಾಲಕ ಸಾವು ಕೇಸ್ – ವಾರ್ಡ್‌ ಸಹಾಯಕ ಎಂಜಿನಿಯರ್‌ ಸಸ್ಪೆಂಡ್!

0
Spread the love

ಬೆಂಗಳೂರು:- ಬಿಬಿಎಂಪಿ ಗೇಟ್‌ ಬಿದ್ದು ಬಾಲಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ಡ್‌ ಸಹಾಯಕ ಎಂಜಿನಿಯರ್‌ ನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

Advertisement

ಪಾಲಿಕೆ ಉಪಯುಕ್ತ ಅಡಳಿತ ವಿಭಾಗ ತಕ್ಷಣವೇ ಜಾರಿಗೆ ಬರುವಂತೆ ಅದೇಶ ಹೊರಡಿಸಿದೆ. ಕರ್ತವ್ಯ ನಿರ್ಲಕ್ಷ್ಯ, ಗೇಟ್ ಸಾಮರ್ಥ್ಯಕ್ಕೆ ತಕ್ಕಂತೆ ಕೀಲುಗಳನ್ನು ಅಳವಡಿಸಿಲ್ಲ, ಸರಿಯಾದ ಸಮಯಕ್ಕೆ ನಿರ್ವಹಣೆ ಮಾಡದ್ದಕ್ಕೆ ಬಿಬಿಎಂಪಿ ಅಡಳಿತ ವಿಭಾಗದ ಉಪ ಅಯುಕ್ತರು ಅಮಾನತು ಮಾಡಿ ಅದೇಶ ಪ್ರಕಟಿಸಿದ್ದಾರೆ.

ಘಟನೆ ಬಗ್ಗೆ ಮೂರು ದಿನಗಳಲ್ಲಿ ವಿವರಣೆ ನೀಡುವಂತೆ ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್ ಅವರಿಗೆ ನೋಟಿಸ್‌ ನೀಡಲಾಗಿದೆ.

ಇನ್ನೂ ಮೈದಾನದ ಗೇಟ್ ಮುರಿದು ತಲೆಗೆ ಬಿದ್ದು ಬಾಲಕ ಸಾವಿಗೀಡಾದ ಘಟನೆ ಮಲ್ಲೇಶ್ವರಂ ಬಿಬಿಎಂಪಿ ಗ್ರೌಂಡ್‌ನಲ್ಲಿ ಭಾನುವಾರ ನಡೆದಿತ್ತು. ಘಟನೆಯಲ್ಲಿ ನಿರಂಜನ್ ಮೃತಪಟ್ಟಿದ್ದ. ಆಟ ಆಡಲು ನಿರಂಜನ್‌ ಮೈದಾನಕ್ಕೆ ಬಂದಿದ್ದ. ಈ ವೇಳೆ ಬಾಲಕ ಗೇಟ್ ಬಳಿಯೇ ನಿಂತಿದ್ದ. ಗೇಟ್ ತೆರೆಯುತ್ತಿದ್ದಂತೆ ಆತನ ತಲೆ ಮೇಲೆ ಮುರಿದು ಬಿದ್ದಿತ್ತು. ಪರಿಣಾಮವಾಗಿ ತಲೆಗೆ ತೀವ್ರ ಗಾಯವಾಗಿ ಮೃತಪಟ್ಟಿದ್ದ.


Spread the love

LEAVE A REPLY

Please enter your comment!
Please enter your name here