ವಿಜಯಸಾಕ್ಷಿ ಸುದ್ದಿ, ನರೇಗಲ್: ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ (ಬಿಸಿಎ) ವಿಭಾಗದ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳು 87.096ರಷ್ಟು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದ 31 ವಿದ್ಯಾರ್ಥಿಗಳಲ್ಲಿ ಕೇವಲ 4 ವಿದ್ಯಾರ್ಥಿಗಳು ಮಾತ್ರ ಫೇಲ್ ಆಗಿದ್ದು ಶೇ 87.096 ರಷ್ಟು ಫಲಿತಾಂಶ ದಾಖಲಾಗಿದೆ. ಇದರಲ್ಲಿ ಅಂಕಿತಾ ಬೆನಹಾಳ 750ಕ್ಕೆ 647 ಅಂಕಗಳನ್ನು ಪಡೆದು ಪ್ರಥಮ, ವೈಷ್ಣವಿ ಪಾಟೀಲ 645 ಅಂಕಗಳನ್ನು ಪಡೆದು ದ್ವಿತೀಯ, ಲಕ್ಷ್ಮೀ ದೇವಿ ದೊಡ್ಡಮನಿ 644 ಅಂಕಗಳನ್ನು ಪಡೆದು ತೃತೀಯ, ಅನು ಮಂಡ್ರೆ ಮತ್ತು ಸಹನಾ ಕವಡಿಮಟ್ಟಿ 641 ಅಂಕಗಳನ್ನು ಪಡೆದು ಚತುರ್ಥ ಸ್ಥಾನಗಳನ್ನು ಪಡೆದಿದ್ದಾರೆ. ಒಟ್ಟು ಹತ್ತು ವಿದ್ಯಾರ್ಥಿಗಳು 600 ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಗ್ರಾಮೀಣ ಭಾಗದ ಕಾಲೇಜಿನಲ್ಲಿ ಅತ್ಯಂತ ಉತ್ಸುಕತೆಯಿಂದ ಓದುವ ಮೂಲಕ ಬಿಸಿಎ 2ನೇ ಸೆಮಿಸ್ಟರ್‌ನಲ್ಲಿ ಉತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದಸಲಾಯಿತು.
ಈ ವೇಳೆ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಎಸ್.ಎಲ್. ಗುಳೆದಗುಡ್ಡ, ಗದಗ ಜಿಲ್ಲೆಯಲ್ಲಿ ಬಿಸಿಎ ಕೋರ್ಸ್ ಹೊಂದಿರುವ ಏಕೈಕ ಸರ್ಕಾರಿ ಪದವಿ ಕಾಲೇಜು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಅಲ್ಲದೆ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್‌ನಿಂದ (ಎಐಸಿಟಿಇ) ಮಾನ್ಯತೆ ಪಡೆದಿದೆ ಎಂದರು.
ಈ ವೇಳೆ ಬಿಸಿಎ ವಿಭಾಗದ ಎಚ್‌ಒಡಿ ಶಶಿಕಲಾ ವಿ.ಎಸ್, ವಿರುಪಾಕ್ಷಪ್ಪ ಸಂಗನಾಳ, ಬಸವರಾಜ ಮಡಿವಾಳರ, ಚಂದ್ರು ಎಂ.ರಾಥೋಡ್ ಇದ್ದರು.