ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮನೋರಮಾ ಮಹಾವಿದ್ಯಾಲಯದ ಶೈಕ್ಷಣಿಕ ಸಾಲಿನ ಬಿಸಿಎ ಕೋರ್ಸಿನ 4ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ವೀಣಾ ಚುಡಗುಂದ (691 ಅಂಕ) ಪ್ರಥಮ ಹಾಗೂ ಸಿಎಂಎ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾಳೆ. ನೇಹಾ ಕಲಬುರ್ಗಿ (683 ಅಂಕ) ದ್ವಿತೀಯ, ಹೀನಾ ಕೌಸರ್ ದರಗಾದ (668 ಅಂಕ) ತೃತೀಯ, ಶೀಲಾ ಕರಿಯಪ್ಪಗೌಡರ (659ಅಂಕ) ನಾಲ್ಕನೇ ಸ್ಥಾನ, ಸೃಷ್ಟಿ ಬಿನ್ನಾಳ (658 ಅಂಕ) ಐದನೇ ಸ್ಥಾನ ಪಡೆದಿದ್ದಾರೆ.
ಮಹಾವಿದ್ಯಾಲಯದ ಫಲಿತಾಂಶ 100ಕ್ಕೆ 100ರಷ್ಟು ಆಗಿದ್ದು, ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಕುಡತರಕರ, ಸಂಸ್ಥೆಯ ನಿರ್ದೇಶಕರಾದ ಸಂಜಯ ಕುಡತರಕರ, ಚೇತನ ಕುಡತರಕರ, ಸಂಯೋಜಕರಾದ ಪ್ರೊ. ಸವಿತಾ ಪೂಜಾರ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.