ಧೋನಿ ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟ BCCI: ಹಳೆಯ ನಿಯಮ ಮತ್ತೆ ಜಾರಿ!

0
Spread the love

MS ಧೋನಿ ಅಭಿಮಾನಿಗಳಿಗೆ ಬಿಸಿಸಿಐ ದೊಡ್ಡ ಸಂತಸದ ಸುದ್ದಿಯನ್ನು ನೀಡಲು ಹೊರಟಿದೆ. ಹಳೆಯ ನಿಯಮವೊಂದನ್ನು ಮತ್ತೆ ಜಾರಿಗೆ ತಂದು ಆ ಮೂಲಕ ಮರಳಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯನ್ನು ಚೆನ್ನೈನಲ್ಲಿ ಆಡಿಸುವ ಸಾಧ್ಯತೆಗೆ ವೇದಿಕೆ ರಚನೆ ಮಾಡುತ್ತಿದೆ.

Advertisement

ಹೌದು, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಧೋನಿಗಾಗಿಯೇ ಐಪಿಎಲ್​ ನಿಯಮದಲ್ಲಿ ಮಹತ್ವದ ಬದಲಾವಣೆ ತರಲು ಬಿಸಿಸಿಐಗೆ ಮನವಿ ಮಾಡಿದೆ.

ಮನವಿಯಂತೆ ಮಹೇಂದ್ರ ಸಿಂಗ್ ಧೋನಿಯನ್ನು ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಸಿಎಸ್​ಕೆ ಕೋರಿದೆ. ಈ ಕೋರಿಕೆಯನ್ನು ಈಡೇರಿಸಲು ಬಿಸಿಸಿಐ ಕೂಡ ಮುಂದಾಗಿದೆ ಎಂಬ ಸುದ್ದಿಯೊಂದಿಗೆ ಇದೀಗ ಹೊರಬಿದ್ದಿದೆ.

ಐಪಿಎಲ್ 2008ರ ನಿಯಮದ ಪ್ರಕಾರ ಯಾವುದಾದರೂ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾದ 5 ವರ್ಷಗಳ ಬಳಿಕ ಆತನನ್ನು ಅನ್​ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಪರಿಗಣಿಸಬಹುದು. ಆದರೆ ಈ ನಿಯಮವು ಬಳಕೆಗೆ ಬಾರದ ಕಾರಣ 2021 ರಲ್ಲಿ ರದ್ದುಗೊಳಿಸಲಾಗಿತ್ತು. ಇದೀಗ ಇದೇ ನಿಯಮವನ್ನು ಜಾರಿಗೊಳಿಸುವಂತೆ ಸಿಎಸ್​ಕೆ ಫ್ರಾಂಚೈಸಿ ಮನವಿ ಮಾಡಿದೆ.

ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ 5 ವರ್ಷ ಆಗಿರುವ ಕಾರಣ ಈ ನಿಯಮವನ್ನು ಜಾರಿಗೊಳಿಸುವಂತೆ ಸಿಎಸ್​ಕೆ ಆಗ್ರಹಿಸಿದೆ. ಅದರಂತೆ ಈ ನಿಯಮ ಜಾರಿಯಾದರೆ ಧೋನಿಯನ್ನು ಕಡಿಮೆ ಮೊತ್ತ ನೀಡಿ ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ತಂಡದಲ್ಲೇ ಉಳಿಸಿಕೊಳ್ಳಬಹುದು.

ಅಂದರೆ ಮಹೇಂದ್ರ ಸಿಂಗ್ ಧೋನಿಯನ್ನು ಸಿಎಸ್​ಕೆ ಕಳೆದ ಸೀಸನ್​ ಹರಾಜಿನ 12 ಕೋಟಿ ರೂ. ನೀಡಿ ಉಳಿಸಿಕೊಂಡಿತ್ತು. ಆದರೆ ಈ ಬಾರಿ ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಉಳಿಸಿಕೊಂಡರೆ ಕೇವಲ 4 ಕೋಟಿ ರೂ. ಮಾತ್ರ ನೀಡಿದರೆ ಸಾಕು. ಇತ್ತ ಧೋನಿಯನ್ನು ಅನ್​ಕ್ಯಾಪ್ಡ್​ ಪಟ್ಟಿಯಲ್ಲಿ ಉಳಿಸಿಕೊಂಡರೆ, ಮತ್ತೋರ್ವ ರಾಷ್ಟ್ರೀಯ ಆಟಗಾರನನ್ನು ದೊಡ್ಡ ಮೊತ್ತ ನೀಡಿ ಉಳಿಸಿಕೊಳ್ಳುವ ಅವಕಾಶ ಸಿಎಸ್​ಕೆ ತಂಡಕ್ಕೆ ದೊರೆಯಲಿದೆ.

ಇಂತಹದೊಂದು ಪ್ಲ್ಯಾನ್ ರೂಪಿಸಿಯೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಹಳೆಯ ನಿಯಮವನ್ನು ಜಾರಿಗೆ ತರುವಂತೆ ಬಿಸಿಸಿಐಗೆ ಮನವಿ ಮಾಡಿದೆ. ಅತ್ತ ಬಿಸಿಸಿಐ ಕೂಡ ಹಳೆಯ ನಿಯಮವನ್ನು ಜಾರಿಗೆ ತರಲು ಸಜ್ಜಾಗಿದೆ ಎಂದು ವರದಿಯಾಗಿದೆ.


Spread the love

LEAVE A REPLY

Please enter your comment!
Please enter your name here