ಲಕ್ಷ್ಮೇಶ್ವರ: ಪಟ್ಟಣದ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ ವಿಜನ್ ಪ.ಪೂ ಕಾಲೇಜು 2025-26ನೇ ಸಾಲಿನ ಪ.ಪೂ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದೆ.
ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದ್ದು, ಅಂಜಲಿ ಲಮಾಣಿ ಶೇ. 94.67 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಆರತಿ ಹೊಸಮನಿ ಶೇ. 88.83, ಹರ್ಷಿತಾ ಪಾಟೀಲ ಶೇ. 88.33, ಪ್ರಿಯಾ ಕುಂದಗೋಳ ಶೇ. 82.16 ಹಾಗೂ ಸ್ನೇಹಾ ಜನಿವಾರದ ಶೇ. 81.67 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಹಾಗೂ ಕಾಲೇಜಿನ ಉತ್ತಮ ಫಲಿತಾಂಶಕ್ಕೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ನೆಲವಿಗಿ, ಕಾರ್ಯದರ್ಶಿ ಲೋಹಿತ್ ನೆಲವಿಗಿ, ಪ್ರಾಚಾರ್ಯರಾದ ಮಂಜುನಾಥ ಬಂಡಿವಾಡ, ಡಿ.ಎಸ್. ಪ್ಯಾಟಿ, ಪ್ರೇಮಾ ಗೊನ್ನೆನ್ನವರ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.



