ತಿಳಿದಿರಲಿ: ಈ ಐದು ರೋಗ ಲಕ್ಷಣಗಳು ಹೃದಯ ರೋಗದ ಮುನ್ಸೂಚನೆಗಳು!

0
Spread the love

ಇತ್ತೀಚಿನ ದಿನಗಳಲ್ಲಿ ಹೃದಯಘಾತ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇದು ಆತಂಕಕಾರಿ ವಿಷಯವಾಗಿದೆ.

Advertisement

ಇಂದಿನ ಆರೋಗ್ಯದ ವಿದ್ಯಮಾನಗಳನ್ನು ಗಮನಿಸಿದರೆ ಬಿಪಿ, ಶುಗರ್ ರೇಂಜ್ ನಲ್ಲಿಯೇ, ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಇರುವ ಜನರ ಸಂಖ್ಯೆ ಕೂಡ ಜಾಸ್ತಿಯಾಗು ತ್ತಿದೆ. ವಿಪರ್ಯಾಸವೆಂದರೆ ಈ ಮೂರು ಕಾಯಿಲೆಗಳ ಲಕ್ಷಣಗಳು ಸರಿಯಾಗಿ ಗೊತ್ತಾಗದೇ ಇರುವುದರಿಂದ,ಸಮಸ್ಯೆ ಬಹಳ ಬೇಗನೇ ಉಲ್ಬಣಗೊಳ್ಳುತ್ತಿವೆ.

ಹೀಗಾಗಿ ಮನುಷ್ಯನಿಗೆ ಹೃದಯದ ಸಮಸ್ಯೆ ಕಾಣಿಸಿಕೊಳ್ಳುವ ಮುನ್ನ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ ಎನ್ನುವುದರ ಬಗ್ಗೆ ನೋಡೋಣ..

ಇದ್ದಕ್ಕಿದಂತೆ ಆರೋಗ್ಯದಲ್ಲಿ ಈ ರೀತಿ ಕಾಣಿಸಿಕೊಂಡರೆ

ಇದ್ದಕ್ಕಿದಂತೆ ಉಸಿರಾಡುವಾಗ ಸಮಸ್ಯೆ ಕಾಣಿಸಿಕೊಂಡರೆ, ಎದೆ ಯಲ್ಲಿ ಅಹಿತಕರ ಒತ್ತಡದ ಉಂಟಾದರೆ ಇಲ್ಲಾಂದ್ರೆ ಎದೆಯಲ್ಲಿ ನೋವು ಅಥವಾ ಚುಚ್ಚಿದಂತಹ ಅನುಭವ ಆಗುತ್ತಿದ್ದರೆ, ಕುತ್ತಿ ಗೆಯ ಭುಜದ ಹತ್ತಿರ ನೋವು ಕಾಣಿಸಿಕೊಂಡರೆ, ದವಡೆ ನೋವು ಇದ್ದರೆ ಆಗ ಇದು ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಯಾಗಿ ರಬಹುದು. ಒಂದು ವೇಳೆ ಈ ರೀತಿಯಾದರೆ, ಕೂಡಲೇ ವೈದ್ಯ ರನ್ನು ಸಂಪರ್ಕಿಸಿ.

ಕಾಲುಗಳಲ್ಲಿ ಊತ ಕಾಣಿಸಿಕೊಂಡರೆ:

ವೈದ್ಯರು ಹೇಳುವ ಹಾಗೆ ಹೃದಯದಲ್ಲಿ ಸಮಸ್ಯೆಗಳು ಕಂಡು ಬಂದಾಗ ಕಾಲುಗಳಲ್ಲಿ ಕೂಡ ಊತ ಕಾಣಿಸಿ ಕೊಳ್ಳುತ್ತದೆಯಂತೆ. ಒಂದು ವೇಳೆ ಏನೂ ಆರೋಗ್ಯ ಸಮಸ್ಯೆಗಳು ಇಲ್ಲದೆ, ಇದ್ದಕ್ಕಿದಂತೆ ಕಾಲುಗಳಲ್ಲಿ ಊತ ಕಾಣಿಸಿಕೊಂಡರೆ, ಅದು ಕೇವಲ ಕಾಲುಗಳಲ್ಲಿ ಕಂಡು ಬಂದಿರುವ ಸಮಸ್ಯೆ ಎಂದು ಕೊಳ್ಳುವುದು ತಪ್ಪು.

ಒಂದು ವೇಳೆ ಈ ಸಮಸ್ಯೆ ಉಲ್ಬಣ ವಾಗುತ್ತಾ ಹೋದರೆ, ಆದಷ್ಟು ಬೇಗ ವೈದ್ಯರ ಸಲಹೆ ಪಡೆದು,ಇದಕ್ಕೆ ಸಂಬಂಧ ಪಟ್ಟ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಕೈಗಳ ತೋಳುಗಳಲ್ಲಿ ಭುಜದ ಹತ್ತಿರ ನೋವು ಕಾಣಿಸಿಕೊಳ್ಳುವುದು:-

ಕೈಗಳ ತೋಳುಗಳಲ್ಲಿ,ಕುತ್ತಿಗೆ ಹಾಗೂ ಭುಜದ ಹತ್ತಿರ ವಿಪರೀತ ನೋವು ಕಾಣಿಸಿಕೊಳ್ಳುವುದು ಕೂಡ ಹೃದ ಯಾಘಾತದ ಪ್ರಮುಖ ಲಕ್ಷಣಗಳು ಎಂದು ಹೇಳ ಬಹುದು.

ಯಾವಾಗ ಹೃದಯ ತನ್ನ ಕಾರ್ಯ ಚಟುವಟಿಕೆಯನ್ನು ಕಡಿಮೆ ಮಾಡುತ್ತಾ ಬರುತ್ತದೆಯೋ, ಆ ಸಂದರ್ಭದಲ್ಲಿ ನರನಾಡಿಗಳಲ್ಲಿ ರಕ್ತ ಪರಿಚಲನೆ ಸರಿಯಾಗಿ ನಡೆಯದೇ ಈ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ಶುರು ವಾಗುತ್ತದೆ.

ಇದ್ದಕ್ಕಿದಂತೆ ತಲೆಸುತ್ತು ಬರುವುದು ಇಲ್ಲಾಂದ್ರೆ ಪ್ರಜ್ಞೆ ತಪ್ಪುವುದು:-

ಹೃದಯದ ಸಮಸ್ಯೆ ಕಂಡು ಬರುವ ಮೊದಲು, ಕೆಲವರಿಗೆ ತಲೆಸುತ್ತು ಬಂದಂತೆ ಆಗುವುದು ಇಲ್ಲಾಂದ್ರೆ ಪ್ರಜ್ಞೆ ತಪ್ಪಿ ಬೀಳುವ ಸಾಧ್ಯತೆ ಇರುತ್ತದೆ.

ಇದಕ್ಕೆ ಪ್ರಮುಖ ಕಾರಣ ಹೃದಯ ತನ್ನ ಬಡಿತ ಕಡಿಮೆ ಮಾಡಿ ಕೊಂಡು, ದೇಹದ ನರನಾಡಿಗಳಿಗೆ ಸಮರ್ಪಕ ವಾಗಿ ಪಂಪ್ ಮಾಡಬೇಕಾದ ರಕ್ತವನ್ನು ಪಂಪ್ ಮಾಡ ಲಾಗದೆ ಇರುವುದರಿಂದ, ಈ ಸಮಸ್ಯೆ ಕಂಡು ಬರುವುದು.

ಕಣ್ಣುಗಳಲ್ಲಿಯೂ ಕೂಡ ಸಮಸ್ಯೆ ಕಾಣಿಸಿಕೊಳ್ಳುತ್ತದೆ:

ಹೃದಯ ತನ್ನ ಕಾರ್ಯ ಚಟುವಟಿಕೆ ಕಡಿಮೆ ಮಾಡಿ ಕೊಳ್ಳುತ್ತಿದ್ದಂತೆ, ಕಣ್ಣುಗಳ ನರನಾಡಿ ಗಳಿಗೆ ಕೂಡ ರಕ್ತ ಸಂಚಾರ ಸರಿಯಾಗಿ ನಡೆಯದೇ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತದೆ.
ಇದರಿಂದ, ಕಣ್ಣುಗಳು ಒಣಗಿ ಹೋದಂತೆ ಕಾಣು ತ್ತವೆ, ಅಲ್ಲದೆ ಕಣ್ಣಿನ ದೃಷ್ಟಿ ಮಂಜಾಗುವುದರ ಜೊತೆಗೆ, ಕಣ್ಣು ಗಳು ಕೆಂಪಗೆ ಆಗಿ ಬಿಡುತ್ತವೆ.


Spread the love

LEAVE A REPLY

Please enter your comment!
Please enter your name here