ಹೂಕೋಸು ಪ್ರತಿ ಋತುವಿನಲ್ಲಿ ಲಭ್ಯವಿದೆ. ಆದರೆ ಚಳಿಗಾಲದಲ್ಲಿ ಹೂಕೋಸಿಗೆ ಬೇಡಿಕೆ ಹೆಚ್ವು. ಆದರೆ ಈ ಹೂಕೋಸು ಅನೇಕ ಅನಾನುಕೂಲಗಳನ್ನು ಹೊಂದಿದೆ. ಆದರೆ ಹೂಕೋಸು ಎಷ್ಟೇ ಪೋಷಕಾಂಶಗಳನ್ನು ಹೊಂದಿದ್ದರೂ ಕೂಡ ಅದನ್ನು ಹೆಚ್ಚು ತಿನ್ನುವುದರಿಂದ ಆರೋಗ್ಯದ ಮೇಲೆ ಕೆಲವು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
ಹೂಕೋಸುಗಳನ್ನು ಅತಿಯಾಗಿ ತಿನ್ನುವ ಅನಾನುಕೂಲಗಳು:
ಪೌಷ್ಠಿಕ ತಜ್ಞರ ಪ್ರಕಾರ, ಹೆಚ್ಚು ಹೂಕೋಸು ತಿನ್ನುವುದರಿಂದ ಹೊಟ್ಟೆಯುಬ್ಬರಿಕೆಯಂತಹ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ, ಜೀರ್ಣಕಾರಿ ಸಮಸ್ಯೆಗಳು ಸಹ ಉದ್ಭವಿಸುತ್ತವೆ. ಅದರಲ್ಲೂ ಹಸಿಯಾಗಿ ತಿಂದರೆ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆಗಳು ಉದ್ಭವಿಸುತ್ತವೆ.
ಹೊಟ್ಟೆಯ ಉರಿಯೂತ:
ಕ್ರೂಸಿಫೆರಸ್ ತರಕಾರಿಗಳು ರಾಫಿನೋಸ್ ಅನ್ನು ಹೊಂದಿರುತ್ತವೆ. ಇದು ಒಂದು ರೀತಿಯ ಕಾರ್ಬೋಹೈಡ್ರೇಟ್ ಆಗಿದೆ. ಕಾರ್ಬೋಹೈಡ್ರೇಟ್ ಇರುವ ತರಕಾರಿ ತಿಂದರೆ ಅದು ಜೀರ್ಣವಾಗದೆ ಕರುಳನ್ನು ಸೇರುತ್ತದೆ. ಅಲ್ಲಿರುವ ಬ್ಯಾಕ್ಟೀರಿಯಾಗಳಿಂದಾಗಿ ಅವು ಹುದುಗಲು ಪ್ರಾರಂಭಿಸುತ್ತವೆ. ಇದು ಹೊಟ್ಟೆಯುರಿಗೆ ಕಾರಣವಾಗುತ್ತದೆ. ಹೂಕೋಸು ಗ್ಲುಕೋಸಿನೋಲೇಟ್ಸ್ ಎಂಬ ಸಲ್ಫರ್-ಒಳಗೊಂಡಿರುವ ರಾಸಾಯನಿಕಗಳನ್ನು ಸಹ ಹೊಂದಿದೆ. ಈ ರಾಸಾಯನಿಕಗಳು ಹೊಟ್ಟೆಯನ್ನು ಪ್ರವೇಶಿಸಿದಾಗ, ಅವು ಹೈಡ್ರೋಜನ್ ಸಲ್ಫೈಡ್ನಂತಹ ಸಂಯುಕ್ತಗಳನ್ನು ರೂಪಿಸುತ್ತವೆ. ಇದು ಹೊಟ್ಟೆಯಲ್ಲಿ ಅನಿಲವನ್ನು ಸೃಷ್ಟಿಸುತ್ತದೆ. ಆದ್ದರಿಂದ, ಹೂಕೋಸು ತಿಂದ ನಂತರ ಹೊಟ್ಟೆ ಉಬ್ಬುತ್ತದೆ.
ಥೈರಾಯ್ಡ್ ಸಮಸ್ಯೆ:
ಹೂಕೋಸು ಮುಂತಾದ ತರಕಾರಿಗಳು ಗ್ರಂಥಿಗಳ ಕಾರ್ಯವನ್ನು ಅಡ್ಡಿಪಡಿಸಬಹುದು. ಹೈಪೋಥೈರಾಯ್ಡಿಸಂನಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಹೂಕೋಸು ತಿನ್ನಬಾರದು.
ಅಲರ್ಜಿಯ ಅಪಾಯ:
ಕೆಲವರಿಗೆ ಹೂಕೋಸು ಎಂದರೆ ಅಲರ್ಜಿ. ಆ ಸಂದರ್ಭದಲ್ಲಿ, ಚರ್ಮದ ಮೇಲೆ ತುರಿಕೆ, ದದ್ದು, ಉಸಿರಾಟದ ತೊಂದರೆ ಮತ್ತು ಊತದಂತಹ ಸಮಸ್ಯೆಗಳು ಉಂಟಾಗುತ್ತವೆ.