ಫೋಟೋಗಳನ್ನು ಹಂಚಿಕೊಳ್ಳುವ ಮೊದಲು ಎಚ್ಚವಾಗಿರಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸದ್ಯಕ್ಕೆ ಎಲ್ಲೆಲ್ಲೂ ಘಿಬ್ಲಿಯದ್ದೇ ಹವಾ. ಇದೀಗ ಬಹುತೇಕರು ತಮ್ಮ ಘಿಬ್ಲಿ ಸ್ಟೈಲ್ ಫೋಟೋ ಸೃಷ್ಟಿಸಿ ವಾಟ್ಸಾಪ್ ಸ್ಟೇಟಸ್, ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡುತ್ತಿರುವುದು ಟ್ರೆಂಡ್ ಆಗಿದೆ. ಘಿಬ್ಲಿ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಜಪಾನಿನ ಅನಿಮೇಷನ್ ಕಲೆಯಾಗಿದ್ದು, ಎಲ್ಲೆಡೆ ಹವಾ ಸೃಷ್ಟಿಸುತ್ತಿದೆ.

Advertisement

ಪ್ರಧಾನಮಂತ್ರಿ ನರೇಂದ್ರ ಮೋದಿ, ಕ್ರಿಕೆಟಿಗ ಸಚಿನ್‌ರಂತಹ ದಿಗ್ಗಜರ ಘಿಬ್ಲಿ ಪೋಟೊಗಳು ಸಾಮಾಜಿಕ ಜಾಲತಣದಲ್ಲಿ ಹರಿದಾಡುತ್ತಿರುವುದರ ಬೆನ್ನಲ್ಲೇ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಅನಿಮೇಷನ್ ಮೋಹಕ್ಕೊಳಗಾಗಿದ್ದಾರೆ. ಎಐ ತಂತ್ರಜ್ಞಾನಕ್ಕೆ ಮನಸೋತಿರುವ ನೆಟ್ಟಿಗರು ತಮ್ಮ ವಿವಿಧ ಪೋಟೋಗಳನ್ನು ಘಿಬ್ಲಿಗೆ ಪರಿವರ್ತಿಸಿ ಹರಿ ಬಿಡುತ್ತಿದ್ದಾರೆ. ಜಪಾನ್(ಟೋಕೊಯೋ)ದಲ್ಲಿ ಕಳೆದ 30 ವರ್ಷಗಳಿಂದ ಚಾಲ್ತಿಯಲ್ಲಿರುವ ಈ ಸ್ಟೈಲ್ ಈಗ ದೇಶದಲ್ಲಿ ಏಕಾಏಕಿ ಬಳಕೆಯಾಗುತ್ತಿರುವುದು ಸೋಜಿಗವಾಗಿದೆ. ಮೊಬೈಲ್‌ನಲ್ಲಿ ಚಾಟ್ ಜಿಪಿಟಿ ವೆಬ್‌ಸೈಟ್‌ನ ಮೂಲಕ ತಮ್ಮ ಇಷ್ಟದ ಪೋಟೋ ಅಪ್‌ಲೋಡ್ ಮಾಡಿ ಘಿಬ್ಲಿ ಸ್ಟೈಲ್ ಫೋಟೋ ಪಡೆದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ.

ಈ ಕುರಿತು ಗದಗ ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣದ ಮೂಲಕ ಘಿಬ್ಲಿ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಬಳಕೆಯಿಂದಾಗಬಹುದಾದ ಅಪಾಯಗಳ ಬಗ್ಗೆ ತಿಳಿಸುತ್ತಿರುವ ಪೊಲೀಸ್ ಘಿಬ್ಲಿ ಜನರೇಟರ್‌ನಲ್ಲಿ ನಿಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡುವುದು ಎಷ್ಟು ಸುರಕ್ಷಿತ, ಅಪಾಯಗಳೇನು ಎಂಬ ಬಗ್ಗೆ ಮಾಹಿತಿ ನೀಡಿದೆ.

ಬಳಕೆದಾರರ ಫೋಟೋಗಳನ್ನು ಅವರ ಅನುಮತಿಯಿಲ್ಲದೆ ವಿವಿಧ ಉದ್ದೇಶಗಳಿಗಾಗಿ ಬಳಸಬಹುದು, ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಯಾರೊಬ್ಬರ ಗುರುತನ್ನು ಕದಿಯಬಹುದು, ಬಳಕೆದಾರರ ಮಾಹಿತಿಯು ಸುರಕ್ಷಿತವಾಗಿರದೇ ಇರಬಹುದು ಮತ್ತು ಹ್ಯಾಕಿಂಗ್‌ಗೆ ಬಲಿಯಾಗಬಹುದು, ಫೋಟೋಗಳನ್ನು ತಪ್ಪಾಗಿ ಬಳಸಬಹುದು, ನಕಲಿ ಪ್ರೊಫೈಲ್‌ಗಳನ್ನು ರಚಿಸಬಹುದು, ಬಳಕೆದಾರರ ಫೋಟೋಗಳ ಅನಧಿಕೃತ ಬಳಕೆಯು ಕಾನೂನು ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಅಪಾಯಗಳನ್ನು ಪರಿಗಣಿಸಿ, ಬಳಕೆದಾರರು ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೊದಲು ಎಚ್ಚರಿಕೆ ವಹಿಸಬೇಕು ಎಂಬ ಎಚ್ಚರಿಕೆಯನ್ನು ನೀಡಿದೆ.

ಇದು ವೈಯಕ್ತಿಕ ಫೋಟೋಗಳನ್ನು, ಮಾಹಿತಿಗಳನ್ನು ಸಂಗ್ರಹಿಸಲು ಮಾಡುತ್ತಿರುವ ಒಂದು ತಂತ್ರವಾಗಿದ್ದು ಆ ಮೂಲಕ ಸೈಬರ್ ವಂಚನೆಯಂತಹ ಪ್ರಕರಣಗಳೂ ನಡೆಯಬಹುದಾಗಿದೆ ಎಂಬ ಎಚ್ಚರಿಕೆ, ಕಳವಳ ವ್ಯಕ್ತವಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಲವು ಸಾಧಕ-ಬಾಧಕಗಳಿವೆ. ನೀವು ಅದನ್ನು ಹೇಗೆ ನಿರ್ವಹಿಸಬೇಕು ಮತ್ತು ನಕಾರಾತ್ಮಕ ಪರಿಣಾಮಗಳಿಗೆ ನೀವು ಹೇಗೆ ಸಿದ್ದರಾಗಿರಬೇಕು ಎಂಬುದು ಮುಖ್ಯವಾಗಿದೆ.


Spread the love

LEAVE A REPLY

Please enter your comment!
Please enter your name here