ಬೇರೆಯವರಿಗೆ ಬೈಕ್, ಕಾರು ಕೊಡ್ತಿದ್ರೆ ಹುಷಾರ್: ಅವರಿಂದ ಈ ತಪ್ಪಾದ್ರೆ ನಿಮ್ಮ ಮೇಲೆ ಬೀಳತ್ತೆ FIR!

0
Spread the love

ಬೆಂಗಳೂರು:- ಸ್ನೇಹಿತರು, ಸಂಬಂಧಿಕರು, ಅಕ್ಕಪಕ್ಕದ ಮನೆಯವರು ಕೇಳ್ತಾರೆ ಅಂತ ಹಿಂದೆ ಮುಂದೆ ನೋಡದೇ ಬೈಕ್, ಕಾರು ಕೊಡೋ ಮುನ್ನ ಈ ಸ್ಟೋರಿ ನೋಡಿ.

Advertisement

ನಗರದಲ್ಲಿ ಓಡಾಡುತ್ತಿರುವ ಕೋಟ್ಯಂತರ ವಾಹನ ಚಾಲಕರಲ್ಲಿ ಹಲವರ ಬಳಿ ಡ್ರೈವಿಂಗ್ ಲೈಸನ್ಸ್ ಇರುವುದೇ ಇಲ್ಲ. ಹಾಗೆಯೇ ಸುಮ್ಮನೇ ವಾಹನಗಳನ್ನು ತೆಗೆದುಕೊಂಡು ಸುತ್ತಾಡುತ್ತಿರುತ್ತಾರೆ. ಅಂಥವರಲ್ಲಿ ಕೆಲವರು ಡ್ರಂಕ್ ಆ್ಯಂಡ್ ಡ್ರೈವ್ ಮಾಡುತ್ತಿರುತ್ತಾರೆ‌.

ಹೀಗೆ ಕುಡಿದು ವಾಹನ ಚಾಲನೆ ಮಾಡುವುದರಿಂದಾಗಿ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇಷ್ಟು ದಿನ ಡ್ರಂಕ್ ಆ್ಯಂಡ್ ಡ್ರೈವ್ಗೆ ದಂಡ ಮಾತ್ರ ವಿಧಿಸಲಾಗುತ್ತಿತ್ತು. ಆದರೆ, ಈಗ ಕುಡಿದು ವಾಹನ ಚಾಲನೆ ಮಾಡುವವರ ಬಳಿ ಡ್ರೈವಿಂಗ್ ಲೈಸನ್ಸ್ ಇಲ್ಲದೇ ಹೋದರೆ ಎಫ್ಐಆರ್ ದಾಖಲಿಸಿ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತಿದೆ.

ಕೇವಲ ವಾಹನ ಚಾಲನೆ ಮಾಡುವವರಿಗೆ ಮಾತ್ರ ಈ ಶಿಕ್ಷೆಯಲ್ಲ. ವಾಹನದ ಆರ್‌ಸಿ ಯಾರ ಹೆಸರಲ್ಲಿ‌ ಇದೆಯೋ ಅವರ ಮೇಲೂ ಕೇಸ್ ಹಾಕಲಾಗುತ್ತಿದೆ. ಸದ್ಯ ಈ ಪ್ರಕ್ರಿಯೆ ಬೆಂಗಳೂರಲ್ಲಿ ಶುರುವಾಗಿದ್ದು, ಪ್ರತಿ ದಿನ ಹತ್ತಾರು ಎಫ್ಐಆರ್ ದಾಖಲಾಗುತ್ತಿವೆ.

ಹೀಗಾಗಿ ವಾಹನ‌ ಮಾಲೀಕರು ಹುಷಾರಾಗಿಲ್ಲದಿದ್ದರೆ ಕಷ್ಟವಿದೆ. ಸ್ನೇಹಿತರು, ಸಂಬಂಧಿಕರು, ಪರಿಚಯದವರು ಕೇಳಿದರೆಂದು ಹಿಂದೆಮುಂದೆ ವಿಚಾರಿಸದೆ ವಾಹನ ಕೊಟ್ಟರೆ ನಾಳೆ ಕೋರ್ಟ್ಗೆ ಅಲೆಯಬೇಕಾಗಬಹುದು.


Spread the love

LEAVE A REPLY

Please enter your comment!
Please enter your name here