ಎಚ್ಚರ ಜನರೇ..ಶೂ, ಚಪ್ಪಲಿ ಧರಿಸುವ ಮುನ್ನ ಹುಷಾರ್; ಹಾವುಗಳು ಇರಬಹುದು!

0
Spread the love

ಬೆಂಗಳೂರು:- ಶೂ, ಚಪ್ಪಲಿ ಧರಿಸುವ ಮುನ್ನ ನೀವು ಕೊಂಚ ಜಾಗರೂಕರಾಗಿರಿ.

Advertisement

ಬೆಂಗಳೂರಿನಲ್ಲಿ ಹಾವುಗಳು ಶೂ, ಚಪ್ಪಲಿಗಳಲ್ಲಿ ಸೇರಿಕೊಳ್ಳುತ್ತಿರುವ ಘಟನೆ ಹೆಚ್ಚುತ್ತಿದೆ. ಗಮನಿಸದೇ ಶೂ ಧರಿಸಿದ ಇಬ್ಬರು ಇತ್ತೀಚಿಗೆ ಸಾವನ್ನಪ್ಪಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ.

ಸೆ.2ರ ಮಂಗಳವಾರ ಬೆಳಿಗ್ಗೆ ಮಾರತ್‌ಹಳ್ಳಿ ಬಳಿ ಮನೆಯಿಂದ ಹೊರ ಬಂದು ಶೂ ಹಾಕಲು ಹೋದ ಓರ್ವ ವ್ಯಕ್ತಿ ಒಂದು ಕ್ಷಣ ಗಾಬರಿಯಾದರು. ಆ ಶೂ ಒಳಗೆ ನಾಗರಹಾವಿತ್ತು. ಶೂ ಒಳಭಾಗದಲ್ಲೇ ಹೆಡೆ ಎತ್ತಿ ಆತಂಕ ಮೂಡಿಸಿತ್ತು. ಮಳೆ ಕಾರಣದಿಂದಾಗಿ ಹಾವುಗಳು ಬೆಚ್ಚಗಿನ ಜಾಗವನ್ನು ಅರಸಿಬಂದಿರುತ್ತವೆ. ಶೂ, ಚಪ್ಪಲಿಗಳು ತುಂಬಾ ಬೆಚ್ಚಗಿರುವುದರಿಂದ ಇವುಗಳಲ್ಲಿ ಸೇರಿರುತ್ತವೆ.

ಇದೇ ರೀತಿ ಬೆಂಗಳೂರಿನಲ್ಲಿ ಮೂರೇ ದಿನದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಜನವರಿ 1ರಿಂದ ಆಗಸ್ಟ್ 17ರ ತನಕ 13,494 ಹಾವು ಕಡಿತ ಪ್ರಕರಣ ದಾಖಲಾಗಿವೆ. ಮಳೆಗಾಲ ಇರೋದ್ರಿಂದ ಹಾವುಗಳು ಬೆಚ್ಚನೆಯ ಸ್ಥಳ ಹುಡುಕಿ ಬರೋದು ಸಹಜ. ಹೀಗಾಗಿ ನೀವು ಹೊರಗೆ ಹೋಗೋ ಮುನ್ನಾ ಶೂ, ಚಪ್ಪಲಿ ಒಮ್ಮೆ ಚೆಕ್ ಮಾಡಿ ಧರಿಸೋದು ಉತ್ತಮ.


Spread the love

LEAVE A REPLY

Please enter your comment!
Please enter your name here