ತರಬೇತಿಯೊಂದಿಗೆ ಆರ್ಥಿಕ ಸದೃಢತೆ ಹೊಂದಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಹಾಗೂ ಗದಗ ಜಿಲ್ಲಾ ಸಹಕಾರ ಯೂನಿಯನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯ ಎಲ್ಲಾ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ತರಬೇತಿ ಶಿಬಿರವನ್ನು ರೋಟರಿ ಕಮ್ಯುನಿಟಿ ಕೇರ್ ಸೆಚಿಟರ್ ಸಭಾಭವನದಲ್ಲಿ ಜರುಗಿತು.

Advertisement

ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ ನೆರವೇರಿಸಿ ಮಾತನಾಡುತ್ತಾ, ಸ್ತ್ರೀಯರು ಸರ್ಕಾರದ ಹಾಗೂ ಈ ಕಾರ್ಯಕ್ರಮದ ಹಲವಾರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಅದಕ್ಕಾಗಿ ನೀಡಲಾಗುವ ತರಬೇತಿಗಳನ್ನು ಪಡೆದು, ಬದುಕಿನಲ್ಲಿ ಆರ್ಥಿಕ ಸದೃಢತೆ ಹೊಂದಬೇಕು. ಇದರಿಂದ ಕುಟುಂಬ ನಿರ್ವಹಣೆಗೆ ಸಹಾಯವಾಗಲಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಮಾತನಾಡುತ್ತಾ, ಮಹಿಳೆಯರು ತಮ್ಮ ಕುಶಲತೆಗೆ ಸಂಬಂಧಿಸಿದ ಆಸಕ್ತಿಯುಳ್ಳ ವಿವಿಧ ತರಬೇತಿಗಳನ್ನು ಪಡೆದು ಸಣ್ಣ ಬಂಡವಾಳದಿಂದ ಉದ್ಯಮ ಪ್ರಾರಂಭಿಸಿ. ಸ್ವ-ಉದ್ಯೋಗದ ತರಬೇತಿಗಳು ಉದ್ಯಮಶೀಲತೆಗೆ ಸಹಕಾರ ನೀಡುತ್ತವೆ. ಗ್ರಾಹಕರನ್ನು ಆಕರ್ಷಿಸಲು ಪರಿಣಾಮಕಾರಿಯಾದ ಮಾರ್ಕೆಟಿಂಗ್ ಅವಶ್ಯ. ಅದಕ್ಕಾಗಿ ಸ್ವ-ಉದ್ಯೋಗದಾತರು ಗ್ರಾಹಕರೊಂದಿಗೆ ಸೌಮ್ಯವಾಗಿ ವರ್ತಿಸಿ ವ್ಯಾಪಾರವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕ ಅರವಿಂದ ಎನ್. ನಾಗಜ್ಜನವರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಸಹಕಾರಿ ಪ್ರಮುಖರಾದ ಅನಿತಾ ಕಲ್ಲಣ್ಣವರ, ಪ್ರಶಾಂತ ಮುಧೋಳ, ಪ್ರಕಾಶ ನವಲಗುಂದ, ಎಚ್.ಎಂ. ಶಾಂತಾ, ಡಾ. ಪ್ರಸನ್ನ ಪಟ್ಟೇದ, ಶಾಂತವ್ವ ರಾಚನಗೌಡ್ರ, ವಿಜಯಲಕ್ಷ್ಮಿ ರಾಮೇನಹಳ್ಳಿ, ಗಿರಿಜವ್ವ ಹಡಪದ, ಜಯಮ್ಮ ತಂಟ್ರಿ ಶಿವಲೀಲಾ ಹಿರೇಮಠ ಉಪಸ್ಥಿತರಿದ್ದರು.

ತರಬೇತಿ ಕಾರ್ಯಾಗಾರದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಅಳವಡಿಸಿಕೊಳ್ಳಬೇಕಾದ ಕೌಶಲ್ಯಗಳು ಮತ್ತು ಮಾರುಕಟ್ಟೆ ವ್ಯವಸ್ಥೆ ಹಾಗೂ ಮಹಿಳೆಯರಿಗೆ ಸರ್ಕಾರದಿಂದ ಸಿಗುವ ಆರ್ಥಿಕ ಸೌಲಭ್ಯಗಳ ಕುರಿತು ಡಾ. ಜಯಶ್ರೀ ಬಿ.ಹಿರೇಮಠ, ಮಹಿಳೆಯರ ಆರೋಗ್ಯ ಕುರಿತು ಕೆ.ಎ. ಹಾದಿಮನಿ, ಸಹಕಾರ ಸಂಘಗಳಲ್ಲಿ ಆಡಳಿತಾತ್ಮಕ ನಿರ್ವಹಣೆ ಕುರಿತು ಡಿ.ಐ. ನದಾಫ್ ಉಪನ್ಯಾಸ ನೀಡಿದರು.

ಗಿರಿಜಾ ನಾಯಕ ಪ್ರಾರ್ಥಿಸಿದರು. ಚಂದ್ರಶೇಖರ ಎಸ್.ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ರಶೀದಾಬಾನು ಸಿ.ಯಲಿಗಾರ ವಂದಿಸಿದರು.

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಲಿಂಗರಾಜಗೌಡ ಎಚ್.ಪಾಟೀಲ ಮಾತನಾಡುತ್ತಾ, ಸ್ವಾವಲಂಬನೆ, ಸಬಲೀಕರಣ ಇವು ಸಹಕಾರಿ ವಲಯದ ಮುಲಭೂತ ಆಶಯಗಳಾಗಿವೆ. ಸಹಕಾರಿ ಉದ್ಯಮಗಳಲ್ಲಿ ಮಹಿಳೆಯರು ಪಾಲ್ಗೊಂಡರೆ, ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

 


Spread the love

LEAVE A REPLY

Please enter your comment!
Please enter your name here