ಬಳಗದ ಸನ್ಮಾನ ಆತ್ಮ ತೃಪ್ತಿ ತಂದಿದೆ : ಎಫ್.ಎನ್. ಹುಡೇದ

0
Beachi club monthly meeting
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಕಳೆದ ಹತ್ತು ವರ್ಷಗಳಿಂದ ನರೇಗಲ್ಲದ ಪರಿಸರದಲ್ಲಿ ತನ್ನ ಸಾಹಿತ್ತಿಕ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಸೇವೆ ಸಲ್ಲಿಸುತ್ತಿರುವ ಬೀಚಿ ಬಳಗವು ಸಮಾಜಕ್ಕೆ ತನ್ನ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಿದೆ. ಇಂದು ಈ ಬಳಗದ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮನಸ್ಸಿಗೆ ಮುದ ನೀಡಿದರೆ, ಬಳಗ ನೀಡಿದ ಸನ್ಮಾನವು ಆತ್ಮ ತೃಪ್ತಿಯನ್ನು ತಂದಿದೆ ಎಂದು ತಾಲೂಕಾ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಎಫ್.ಎನ್. ಹುಡೇದ ಹೇಳಿದರು.

Advertisement

ಶನಿವಾರ ಸಂಜೆ ಪಟ್ಟಣದ ಹಿರೇಮಠ ಸಭಾ ಭವನದಲ್ಲಿ ನಡೆದ ಬೀಚಿ ಬಳಗದ ಮಾಸಿಕ ಸಭೆಯಲ್ಲಿ ಆಚರಿಸಲಾದ ಶಿಕ್ಷಕರ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸನ್ಮಾನಗಳು ಸಾಂಸ್ಕೃತಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಪ್ರಶಸ್ತಿಗಳು ಎಂದಿಗೂ ಪ್ರತಿಷ್ಠೆಯ ಸಂಗತಿಗಳಾಗದೆ ಸೌಜನ್ಯದ ಪ್ರತೀಕವಾಗಬೇಕು. ತಮ್ಮ ನೋವುಗಳನ್ನು ನುಂಗಿ ಸಮಾಜದ ಸ್ವಾಸ್ಥ್ಯಕ್ಕೆ ಬರೆದ ಇಬ್ಬರು ಮಹಾ ಲೇಖಕರೆಂದರೆ ಒಬ್ಬರು ಬೀಚಿ ಮತ್ತೊಬ್ಬರು ಡಾ. ದ.ರಾ. ಬೇಂದ್ರೆ. ಸಾಧನೆಗಳನ್ನು ಗುರುತಿಸಿ ಸನ್ಮಾನಿಸುವ ಹೃದಯಗಳು ಮತ್ತು ಮನಸ್ಸುಗಳು ಎಂದಿಗೂ ದೊಡ್ಡವು. ಇಂದು ಬೀಚಿ ಬಳಗ ನೀಡಿದ ಈ ಸನ್ಮಾನ ಎಂದಿಗೂ ನಮ್ಮ ಹೃದಯದಲ್ಲಿರುತ್ತದೆ ಎಂದು ಹುಡೇದ ಹೇಳಿದರು.

ಸನ್ಮಾನಿತರಾದ ಶಿಕ್ಷಕ ಬಿ.ಡಿ. ಯರಗೊಪ್ಪ, ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ, ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಮಾತನಾಡಿದರು. ಸಮಾರಂಭದಲ್ಲಿ ಡಾ. ಕೆ.ಬಿ. ಧನ್ನೂರ, ಶಿವಪುತ್ರಪ್ಪ ಸಂಗನಾಳ, ಸಂಗಮೇಶ ಮೆಣಸಗಿ, ಡಾ. ಆರ್.ಕೆ. ಗಚ್ಚಿನಮಠ, ಡಿ.ಎ. ಅರವಟಗಿಮಠ, ಜಿ.ಎ. ಬೆಲ್ಲದ, ಬಿ.ಎ. ಕಲಾಲಬಂಡಿ, ಎಂ.ಎಚ್. ಸಿದ್ದಿ, ವಿನಾಯಕ ಗ್ರಾಮಪುರೋಹಿತ, ಲಕ್ಷ್ಮೀ ಗ್ರಾಮಪುರೋಹಿತ, ಲಲಿತಾ ಕಳಕಣ್ಣವರ, ನೇತ್ರಾವತಿ ಕಳಕಣ್ಣವರ, ನಿರ್ಮಲಾ ಹಿರೇಮಠ, ಅಕ್ಕಮ್ಮ ಬೆಟಗೇರಿ, ಎಚ್.ಬಿ. ಉಮಚಗಿ, ಎಸ್.ಬಿ. ಬೂದಿಹಾಳ, ಎಸ್.ಐ. ಶಿವಶಿಂಪಿ, ಶೇಖರಪ್ಪ ಯಾವಗಲ್ಲ, ಮುತ್ತಣ್ಣ ಹಡಪದ, ಮಹಾಲಿಂಗ ಶಿರ್ಸಿ, ಈಶ್ವರಪ್ಪ ಇಳಕಲ್ಲ, ಆರ್.ಎಸ್. ಮಠ, ಆರ್.ಎಸ್. ನರೇಗಲ್ಲ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಜಿ.ಎ. ಪಾಟೀಲ, ತೋಟಪ್ಪ ಆಡೂರ, ಛಾಯಾಶ್ರೀ ಪ್ರಶಸ್ತಿ ಪುರಸ್ಕೃತ ಮಲ್ಲಯ್ಯ ಗುಂಡಗೋಪುರಮಠ ಹಾಗೂ ಚಿನ್ನದ ಪದಕ ಪಡೆದ ಪೂಜಾ ಗ್ರಾಮಪುರೋಹಿತ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಶಿಕ್ಷಕ ಬಿ.ಟಿ. ತಾಳಿ ಪ್ರಾರ್ಥಿಸಿದರು. ಎಂ.ಕೆ. ಬೇವಿನಕಟ್ಟಿ ಸ್ವಾಗತಿಸಿದರು. ದೀಪಾ ಗುಂಡಗೋಪುರಮಠ ಭಕ್ತಿ ಗೀತೆ ಹಾಡಿದರು. ವಿ.ಎ. ಕುಂಬಾರ ನಿರೂಪಿಸಿದರು. ಮುಖ್ಯ ಶಿಕ್ಷಕ ಎಂ.ವಿ. ವೀರಾಪೂರ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ ಮಾತನಾಡಿ, ಬೀಚಿ ಬಳಗ ಎಲ್ಲರ ಸಹಕಾರದಿಂದ ಯಶಸ್ವಿ 10 ವರ್ಷಗಳನ್ನು ಪೂರೈಸಿ 11ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಇಂದು ಈ ಬಳಗದ ವತಿಯಿಂದ ಸನ್ಮಾನಗೊಂಡ ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನೈಪುಣ್ಯತೆಯನ್ನು ಪಡೆದವರೇ ಆಗಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿ, ಪುರಸ್ಕಾರಗಳು ದೊರೆಯಲಿ ಎಂದರು.


Spread the love

LEAVE A REPLY

Please enter your comment!
Please enter your name here