ಮಂಡ್ಯ:- ಒಂದೇ ತಾಯಿಯ ಮಕ್ಕಳಂತೆ ಆಡಳಿತ ಮಾಡೋರು ಕಾಂಗ್ರೆಸ್ ನವರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ನಾವು ಬಡವರಿಗೆ ಕೆಲಸ ಮಾಡಿದರೆ ಕೆಲವರಿಗೆ ಹೊಟ್ಟೆ ಕಿಚ್ಚು. ನಾವು ಜನರಿಗೆ ಕೊಟ್ಟ ಭರವಸೆಗಳನ್ನು ಅಧಿಕಾರಕ್ಕೆ ಬಂದ 1 ವರ್ಷದಲ್ಲಿ ಈಡೇರಿಸಿದ್ದೇವೆ. ಈ ನಿಮ್ಮ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾನೆ. ಪ್ರತಿ ಕುಟುಂಬಕ್ಕೆ ಐದಾರು ಸಾವಿರ ಹಣ ಸಿಗ್ತಾ ಇದೆ. ಎಲ್ಲಾ ಧರ್ಮದ ಜನರಿಗೆ ಹಣ ಸಿಗುತ್ತಿದೆ. ಎಲ್ಲಾ ಮಹಿಳೆಯರು ಬಸ್ಸಿನಲ್ಲಿ ಫ್ರೀಯಾಗಿ ಬಂದಿರ್ತಾರೆ. ಯಾರ ಬಳಿ ಕಾರಿಲ್ಲವೋ ಅವರು ಇಲ್ಲಿಗೂ ಫ್ರೀಯಾಗಿ ಬಸ್ನಲ್ಲಿ ಬಂದಿದ್ದಾರೆ.
ಇವತ್ತಿನವರೆಗೂ 7 ಕೋಟಿ 87 ಲಕ್ಷ ಜನರು ಬಸ್ನಲ್ಲಿ ಫ್ರೀ ಆಗಿ ಓಡಾಡಿದ್ದಾರೆ. ಇದು ನಮ್ಮನ್ನು ಟೀಕೆ ಮಾಡೋರಿಗೆ ಕಾಣುತ್ತಿಲ್ಲ ಎಂಬುದೇ ಬೇಸರದ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಾವು ಬಡವರಿಗೆ ಕೆಲಸ ಮಾಡಿದರೆ ಕೆಲವರಿಗೆ ಹೊಟ್ಟೆ ಕಿಚ್ಚು. ಯಾರೂ ಇದರ ಉಪಯೋಗ ಪಡೆದುಕೊಳ್ಳುತ್ತಾ ಇದ್ದಾರೋ ಅವರು ಉತ್ತರ ಕೊಡಬೇಕು. ನಮ್ಮ ವಿರೋಧ ಪಕ್ಷದವರನ್ನು ನಂಬೋದಕ್ಕೆ ಹೋಗ್ಬೇಡಿ. ಅವರು ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು.
ಕಳೆದ ವರ್ಷ ಮಳೆಯಾಗಿರಲಿಲ್ಲ, ಈ ವರ್ಷ ಮಳೆಯಾಗಿದೆ,. ಸಿದ್ದರಾಮಯ್ಯನ ಕಾಲ್ಗುಣ ಚೆನ್ನಾಗಿಲ್ಲ ಅಂತ ಹೇಳಿದ್ರು. ಆದರೆ, ರಾಜ್ಯದ ಎಲ್ಲಾ ನದಿಗಳೂ ತುಂಬಿವೆ. ಈಗ ಯಾರೂ ಮಾತಾಡಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ನಮಗೆ ಯಾವುದೇ ಜಾತಿ, ಧರ್ಮ ಇಲ್ಲ. ಬಿಜೆಪಿ ಜೆಡಿಎಸ್ ಥರ ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿ ಕಟ್ಟಲ್ಲ. ಒಂದೇ ತಾಯಿಯ ಮಕ್ಕಳಂತೆ ಆಡಳಿತ ಮಾಡೋರು ಕಾಂಗ್ರೆಸ್ ನವರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.