ಬೆಂಗಳೂರು:- ಸರ್ಕಾರಿ ಕಚೇರಿಯಲ್ಲೇ ಬೆಡ್ ರೂಂ ಮಾಡಿಕೊಂಡಿದ್ದ ಕಾರವಾರದ ಪ್ರವಾಸೋದ್ಯಮ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
Advertisement
ಜಯಂತ್ ಅಮಾನತುಗೊಂಡ ಪ್ರವಾಸೋದ್ಯಮ ಅಧಿಕಾರಿ. ಉತ್ತರ ಕನ್ನಡ ಪ್ರವಾಸೋದ್ಯಮ ಉಪ ನಿರ್ದೇಶಕ ಜಯಂತ್ ತಮ್ಮ ಕಚೇರಿಯಲ್ಲೇ ಬೆಡ್ ರೂಂ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗಿದೆ.
ಈ ಸಂಬಂಧ ಸಚಿವ ಎಚ್ ಕೆ ಪಾಟೀಲ್ ಮಾತನಾಡಿ, ನನಗೂ ಜಯಂತ್ ಎಂಬ ಅಧಿಕಾರಿ ಬಗ್ಗೆ ಮಾಹಿತಿ ಬಂದಿದೆ. ಇಂಥ ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರ ಜೊತೆ ಮಾತಾಡಿದ್ದೇನೆ. ಕಾರವಾರದ ಅಧಿಕಾರಿ ಜಯಂತ್ ಅವರನ್ನು ಅಮಾನತು ಮಾಡುವಂತೆ ಸೂಚಿಸಿದ್ದೇನೆ ಎಂದರು.