ಬೇಸಿಗೆ ಅಂತ ಐಸ್ ಕ್ರೀಮ್ ತಿನ್ನೋ ಮುನ್ನ ಈ ಸ್ಟೋರಿ ನೋಡಿ: ಬರುತ್ತಂತೆ ಕ್ಯಾನ್ಸರ್!?

0
Spread the love

ಬೆಂಗಳೂರು:- ಪ್ಲಾಸ್ಟಿಕ್ ಇಡ್ಲಿ ಆಯ್ತು, ಕಲ್ಲಂಗಡಿ ಆಯ್ತು, ಕಲರ್ ಕಲರ್ ಕಬಾಬ್ ಆಯ್ತು, ಗೋಬಿ ಮಂಚೂರಿ ಆಯ್ತು, ಪನ್ನೀರ್ ಆಯ್ತು. ಈಗ ಕೂಲ್ ಕೂಲ್ ಐಸ್ಕ್ರೀನ ಸರದಿ. ಬೇಸಿಗೆಯಲ್ಲಿ ಬಿಸಿಲು ಜಾಸ್ತಿ ಎಂದು ಐಸ್‌ಕ್ರೀಂ ತಿನ್ನುವವರಿಗೆ ಇದು ಶಾಕಿಂಗ್ ಸುದ್ದಿ.

Advertisement

ಎಸ್, ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ಕೂಡ ಆಹಾರ ಪದಾರ್ಥಗಳನ್ನ ತಪಾಸಣೆ ಮಾಡುತ್ತಾರೆ. ಈಗ ಬೇಸಿಗೆ ಬಿಸಿಲು ಜಾಸ್ತಿ ಇರುವುದರಿಂದ ಐಸ್‌ಕ್ರೀಂ ಅನ್ನು ಜನರು ಜಾಸ್ತಿ ಸೇವನೆ ಮಾಡುತ್ತಾರೆ. ಐಸ್‌ಕ್ರೀಂನಲ್ಲಿ ಕಲರ್ ಬಳಸಿರುವ ಕಾರಣ ಎಚ್ಚೆತ್ತುಕೊಂಡ ಸುರಕ್ಷತಾ ಇಲಾಖೆ ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ಮಾಡಿ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ರವಾನೆ ಮಾಡಿದ್ದಾರೆ.

ಕಲರ್ ಬಳಕೆ, ಕೆಮಿಕಲ್ ಬಳಕೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಆಹಾರ ತಜ್ಞರು ಹೇಳುತ್ತಿದ್ದಾರೆ. ಸನ್ಸೆಟ್ ಯೆಲ್ಲೋ, ಸನ್ ಸೆಟ್ ಗ್ರೀನ್ ಕಲರ್ ಬಳಕೆ ಮಾಡುವುದರಿಂದ ಕಾರ್ಸ್ಮೋಜೆನಿಕ್ ಕ್ಯಾನ್ಸರ್ಕಾರಕ ಉತ್ಪತ್ತಿಯಾಗುತ್ತದೆ. ಕ್ಯಾನ್ಸರ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಆಹಾರ ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಲ್ಯಾಬ್ ವರದಿ ಏನು ಹೇಳುತ್ತದೆ? ಬಳಿಕ ಆಹಾರ ಇಲಾಖೆ ಕೈಗೊಳ್ಳುವ ಕ್ರಮ ಏನು ಎಂಬುವುದು ಮುಂದೆ ಕಾದುನೋಡಬೇಕಾಗಿದೆ.


Spread the love

LEAVE A REPLY

Please enter your comment!
Please enter your name here