ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ರೈಲುಗಳು ಪೀಕ್ ಅವರ್‌ನಲ್ಲಿ ಬಿಎಂಟಿಸಿ ಬಸ್‌ಗಳಂತಾಗುತ್ತಿವೆ, ನಿಲ್ದಾಣ ಎನ್ನುವುದು ಮೆಜೆಸ್ಟಿಕ್ ಬಸ್ ಸ್ಟಾಂಡ್‌ನ ಹಾಗಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ರೈಲಿನಲ್ಲೇ ಆಹಾರ ಸೇವನೆ, ಹುಚ್ಚಾಟ, ಲೈಂಗಿಕ ಕಿರುಕುಳದಂಥ ಘಟನೆಗಳು ವರದಿಯಾಗಿದ್ದವು. ಇದೀಗ ಇವುಗಳಿಗೆ ಪೂರಕವಾಗಿ ಬಸ್ ನಿಲ್ದಾಣಗಳಲ್ಲಿ ಹೆಚ್ಚಾಗಿ ಕಂಡುಬರುವ ಮತ್ತು ಹೆಚ್ಚಿನ ರೈಲುಗಳಲ್ಲಿ ಸಾಮಾನ್ಯವಾಗಿರುವ ಭಿಕ್ಷಾಟನೆ ಮೆಟ್ರೋ ರೈಲಿಗೂ ಕಾಲಿಟ್ಟಿದೆ!
ಹೌದು, ಚಲಘಟ್ಟ ದಿಂದ ವೈಟ್ಫಿಲ್ಡ್ ಮಾರ್ಗದ ಮೆಟ್ರೋದಲ್ಲಿ ಅಂಗವಿಕಲ ವ್ಯಕ್ತಿಯೊಬ್ಬ ಭಿಕ್ಷಾಟನೆ ನಡೆಸಿದ್ದು. ಕ್ಯೂಆರ್ ಕೋಡ್ ಮೂಲಕ ಟೆಕೆಟ್ ಖರೀದಿಸಿ ಮೆಟ್ರೋ ಹತ್ತಿದ್ದಾನೆ ಎಂದು ತಿಳಿದು ಬಂದಿದೆ. ತನ್ನ ದೈಹಿಕ ಹೂನವನ್ನು ತೋರಿಸಿಕೊಂಡು ಮೆಟ್ರೋದಲ್ಲಿ ಭಿಕ್ಷಾಟನೆ ನಡೆಸಿದ್ದು. ಭಿಕ್ಷುಕನನ್ನು ಕಂಡ ಪ್ರಯಾಣಿಕರು ದಂಗಾಗಿದ್ದು. ಇಲ್ಲಿಯೂ ಶುರು ಮಾಡಿಕೊಂಡು ಬಿಟ್ರಾ ಎಂಬ ಮಾತುಗಳು ಕೇಳಿಬಂದಿವೆ.