ಬೆಳಗಾವಿ: ಬೆಳಗಾವಿ ನಗರದ ನಾರವೇಕರ್ ಗಲ್ಲಿಯಲ್ಲಿನ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ವೃದ್ಧೆ ಸಾವನ್ನಪ್ಪಿರುವ ಘಟನೆ ಬೆಳಗಾವಿ ನಗರದ ನಾರವೇಕರ್ ಗಲ್ಲಿಯಲ್ಲಿ ನಡೆದಿದೆ. ಸುಪ್ರಿಯಾ ಬೈಲೂರ(78) ಮೃತ ವೃದ್ದೆಯಾಗಿದ್ದು, ಒಂಟಿಯಾಗಿ ಮನೆಯಲ್ಲಿ ವಾಸವಿದ್ದ ವೃದ್ಧೆ ಸುಪ್ರಿಯಾ, ಅಡುಗೆ ಮಾಡಲು ಹೋದಾಗ ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆ.
Advertisement
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮನೆಯಲ್ಲಿನ ಬೆಡ್ ಗು ತಗುಲಿ ಮನೆಗೆ ವ್ಯಾಪಿಸಿದೆ. ಮನೆಯಲ್ಲಿನ ಸಾಮಾಗ್ರಿಗಳು, ಪೀಠೋಪಕರಣ ಕೂಡ ಬೆಂಕಿಗಾಹುತಿಯಾಗಿದೆ.
ಇನ್ನೂ ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಗ್ರಾಮಸ್ಥರು ಅಗ್ನಿಶಾಮಕ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.