ವಿಜಯಸಾಕ್ಷಿ ಸುದ್ದಿ, ನರಗುಂದ: ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ನಾಡಿನ ಸಮಸ್ತ ಪ್ರಜೆಗಳಿಗೆ ಸಮಾನ ಅವಕಾಶ, ಹಕ್ಕು, ಮತ್ತು ಅವಕಾಶಗಳು ಸಿಗಬೇಕೆನ್ನುವ ಉದ್ದೇಶದಿಂದ ಹಾಗೂ ಶೋಷಿತ, ಅವಕಾಶ ವಂಚಿತ ಜನ ಸಮುದಾಯಗಳಿಗೆ ಅವಕಾಶಗಳು ಸಿಗಬೇಕು ಎಂದು ಡಿ.೧೦ರಿಂದ ಪ್ರಾರಂಭಾಗಿರುವ ಯೂ-ಟರ್ನ್ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ-2 ಎಂಬ ಘೋಷಣೆಯುಕ್ತ ಜಾಥಾ ಪಟ್ಟಣದ ಶಿವಾಜಿ ವೃತ್ತದಲ್ಲಿ ಜಮಾಯಿಸಿತು.
ಈ ಸಂದಂರ್ಭದಲ್ಲಿ ಪಟ್ಟಣದ ನೂರಾರು ಎಸ್.ಡಿ.ಪಿ.ಐ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಬಾದಾಮಿ ಕಡೆಯಿಂದ ಆಗಮಿಸಿದ ಜಾಥಾದಿಂದ ರಾಜ್ಯಾಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದಶಿಗಳು ಸಂಚಾಲಕರನ್ನು ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಚಾಲಕ ಬಿ.ಆರ್.ಭಾಸ್ಕರ ಪ್ರಸಾದ್, ಆಡಳಿತಾರೂಢ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಈ ಹಿಂದೆ ನೀಡಿದ್ದ ಭರವಸೆಯನ್ನು ಮರೆತಿದೆ. ಅದಕ್ಕಾಗಿ ಮುಸ್ಲಿಂ ಸಮುದಾಯದ ಬಿ ಮಿಸಲಾತಿ ಹಾಗೂ ಶೋಷಿತ, ಅವಕಾಶ ವಂಚಿತ ಎಲ್ಲಾ ಸಮುದಾಯಗಳಿಗೆ ಸಮಾನವಾದ ಅವಕಾಶ ಸಿಗಬೇಕು ಎಂದು ಮತ್ತೆ ಡಿ.12ಕ್ಕೆ ಬೆಳಗಾವಿ ವಿಧಾನಸೌಧ ಅಧಿವೇಶನದಲ್ಲಿ ರಾಜ್ಯವ್ಯಾಪಿ ಪಕ್ಷದ ಕಾರ್ಯಕರ್ತರೊಂದಿಗೆ ಪ್ರತಿಭಟಿಸಲಾಗುವದು ಎಂದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಗದಗ ಜಿಲ್ಲಾಧ್ಯಕ್ಷ ಬಿಲಾಲ ಗೋಕಾವಿ, ರಮಜಾನ ಕಡಿವಾಲರ್, ನರಗುಂದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ದಾವಲಸಾಬ ರಾಜೇಖಾನ, ಪ್ರಧಾನ ಕಾರ್ಯದರ್ಶಿ ಖಲಂದರ ಸಕಲಿ, ಖಜಾಂಚಿ ಇಮ್ರಾನ್ ಅತ್ತಾರ, ಜಮಾಲಸಾಬ ಮುಲ್ಲಾ, ಜವಾದ ಮುಲ್ಲಾ, ಮೆಹಬೂಬ ಮಕಾಂದಾರ, ಅಶರಫ ನವಲಗುಂದ, ಇಮ್ರಾನ ಮುನವಳ್ಳಿ, ಸಿಕಂದರ ಮುಂತಾದವರಿದ್ದರು.