ಬೆಳಗಾವಿ: ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಿನ್ನೆಲೆ ಇಂದು ಬೆಳಗಾವಿಯ ಸವದತ್ತಿಗೆ ಭೇಟಿ ನೀಡಿದರು. ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ಪತ್ನಿ ಪಾರ್ವತಿ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮುಡಾ ಹಗರಣದ ಕೇಂದ್ರಬಿಂದುವಾಗಿರುವ ಸಿಎಂ ಪತ್ನಿ ಪಾರ್ವತಿ. ಯಾವುದೇ ಕ್ಷಣದಲ್ಲೂ ಸಿಎಂ ಪತ್ನಿ ಪಾರ್ವತಿಗೆ ಲೋಕಾಯುಕ್ತ ನೋಟಿಸ್ ಕೊಡುವ ಸಾಧ್ಯತೆಯಿದೆ.
Advertisement
ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಹಿನ್ನೆಲೆ ಸಂಕಷ್ಟದಿಂದ ಪತ್ನಿಯನ್ನು ಪಾರು ಮಾಡುವಂತೆ ಶಕ್ತಿದೇವತೆ ಸವದತ್ತಿ ಯಲ್ಲಮ್ಮ ದೇವಿಯ ಮೊರೆ ಹೋಗಿದ್ದಾರೆ. ಸಿಎಂ ತಲೆ ಮೇಲೆ ನಾಗಮುದ್ರಿಕೆ ಇಟ್ಟು ಆಶೀರ್ವದಿಸಿದರು. ಇನ್ನು ಗರ್ಭಗುಡಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಾಷ್ಟಾಂಗ ನಮಸ್ಕಾರ ಹಾಕಿದರು.