ಬೆಳಗಾವಿ:- ಪಾನ್ ಶಾಪ್ ಅಂಗಡಿ ಬೀಗ ಮುರಿದು ಕಳ್ಳರು ಕೈಚಳಕ ತೋರಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬನ್ನೂರ ಗ್ರಾಮದಲ್ಲಿ ಜರುಗಿದೆ.
ಬನ್ನೂರ ಗ್ರಾಮದ ನಿವಾಸಿ ಪ್ರಕಾಶ ಕುಂದ್ರಾಳಗೆ ಸೇರಿದ ಪಾನ್ ಶಾಪ್ ಅಂಗಡಿ ಇದಾಗಿದ್ದು, ಸಿಗರೇಟ್ ಪ್ಯಾಕ್, ಗುಟಕಾ ಪ್ಯಾಕ್, ಚಿಲ್ಲರೆ ಹಣ ಕದ್ದು ಖದೀಮರು ಎಸ್ಕೇಪ್ ಆಗಿದ್ದಾರೆ. ತಡರಾತ್ರಿ ಇಬ್ಬರು ಕಳ್ಳರು ಆಗಮಿಸಿ ಪಾನ್ ಶಾಪ್ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.
ಕಳ್ಳರ ಚಲನವಲನ ಸಂಪೂರ್ಣ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಹಿತಿ ಮೇರೆಗೆ ಸ್ಥಳಕ್ಕೆ ರಾಮದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



