ಬೆಳಗಾವಿ ಅಧಿವೇಶನ ಶತಮಾನೋತ್ಸವ:  ಸಮಾವೇಶದಲ್ಲಿ ಪಾಲ್ಗೊಳ್ಳಲು ಶತಾಯುಷಿಗೆ ಜಿಲ್ಲಾಡಳಿತದಿಂದ ಆಮಂತ್ರಣ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ೨೬-೧೨-೧೯೨೪ರಂದು ಬೆಳಗಾವಿಯಲ್ಲಿ ನೆಡೆದ ಐತಿಹಾಸಿಕ ಎಐಸಿಸಿ ಅಧಿವೇಶನಕ್ಕೆ ಕರ್ನಾಟಕದ ಇತಿಹಾಸದಲ್ಲಿ ಒಂದು ವಿಶೇಷ ಸ್ಥಾನವಿದೆ. ಬೆಳಗಾವಿ ಅಧಿವೇಶನ ಶತಮಾನೋತ್ಸವದ ಅಂಗವಾಗಿ ಡಿಸೆಂಬರ್ ೨೭ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ವತಿಯಿಂದ ಬೃಹತ್ ಕಾಂಗ್ರೆಸ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದಲ್ಲಿ ಪಾಲ್ಗೊಳ್ಳಲು ಶತಾಯಿಷಿ, ಸ್ವಾತಂತ್ರ ಹೋರಾಟಗಾರ್ತಿ ಶಾಂತಾಬಾಯಿ ವರ್ಣೆಕರ್ ಅವರಿಗೆ ಜಿಲ್ಲಾಡಳಿತದಿಂದ ಬುಧವಾರ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

Advertisement

ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಸೂಚನೆಯಂತೆ ಸರ್ಕಾರದ ವತಿಯಿಂದ ಗದಗ ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರು ಶಾಂತಾಬಾಯಿ ವರ್ಣೆಕರ್ ಅವರ ನಿವಾಸಕ್ಕೆ ತೆರಳಿ ಬೆಳಗಾವಿಯಲ್ಲಿ ನಡೆಯುವ ಗಾಂಧಿ ಭಾರತ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಗದಗ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಮುಖಂಡರಾದ ಅರವಿಂದ್ ಪಾಲನಕರ, ಗಂಗಾಧರ್ ನಭಾಪುರ, ಎಸ್.ಆರ್. ರೇವಣಕರ್, ಉದಯ್ ವರ್ಣೆಕರ್, ಪ್ರಕಾಶ್ ವರ್ಣೇಕರ್ ಹಾಜರಿದ್ದರು.

ಮಹಾತ್ಮ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಕೈಗೊಂಡ ಸಂಧರ್ಭದಲ್ಲಿ ಅಂಕೋಲಾಕ್ಕೆ ಆಗಮಿಸಿದ್ದ ವೇಳೆ ಶಾಂತಾಬಾಯಿ ಸಬ್ಬರಾವ್ ವರ್ಣೆಕರ್ ಅವರ ಸೋದರ ಸಂಬAಧಿಗಳಿಬ್ಬರು ಸ್ವಾತಂತ್ರ‍್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮಹಾತ್ಮ ಗಾಂಧೀಜಿಯವರು ಹಲವು ದಿನಗಳ ಕಾಲ ಅಂಕೋಲಾ ಸೇರಿದಂತೆ ಸುತ್ತ ಮುತ್ತಲಿನ ನಗರ ಪ್ರದೇಶದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಶಾಂತಾಬಾಯಿ ಮೂಲತಃ ಅಂಕೋಲಾ ಭಾಗದವರು. ಮಹಾತ್ಮ ಗಾಂಧಿಜಿಯವರು ಅಂಕೊಲಾಕ್ಕೆ ಉಪ್ಪಿನ ಸತ್ಯಾಗ್ರಹಕ್ಕಾಗಿ ಬಂದಾಗ ಶಾಂತಾಬಾಯಿ ಅವರು ಅಡುಗೆ ಸಿದ್ಧಪಡಿಸಿ ಅನೇಕ ದಿನಗಳ ಕಾಲ ಗಾಂಧೀಜಿಯವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದರು. ಪ್ರತಿದಿನ ಆಡುಗೆ ಸಿದ್ದಪಡಿಸಿ ತಮ್ಮ ಸಹೋದರ ಕಡೆಯಿಂದ ಗಾಂಧೀಜಿಯವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದರು. ಈಗ ಅವರು ಅಂಕೋಲಾದಿಂದ ಗದಗ ಭಾಗದಲ್ಲಿ ಬಂದು ನೆಲೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here