ಬೆಳಗಾವಿ: ಹೊಸ ಜಿಲ್ಲಾ ಘೋಷಣೆಗೆ ಸರ್ಕಾರದಲ್ಲಿ ಒತ್ತಡವಿದೆ: ಸಚಿವ ಸತೀಶ್ ಜಾರಕಿಹೊಳಿ

0
Spread the love

ಬೆಳಗಾವಿ:- ಜಿಲ್ಲೆಯಲ್ಲಿ ಎರಡು ಹೊಸ ತಾಲೂಕುಗಳ ಬಹಳ ಅವಶ್ಯಕತೆ ಇದೆ. ಅವುಗಳನ್ನು ತಾಲೂಕುಗಳನ್ನಾಗಿ ಮಾಡಬೇಕು ಎನ್ನುವುದು ಸರ್ಕಾರದಲ್ಲಿ ಒತ್ತಡವಿದೆ. ಜಿಲ್ಲಾ ವಿಭಜನೆಯಾಗಲೆಂದು ನಮಗೂ ಆಸೆ ಇದೆ ಎಂದು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿ ಜಿಲ್ಲಾ ವಿಭಜನೆ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ. ಜಿಲ್ಲಾ ವಿಭಜನೆಯಾಗುವುದು ಖಚಿತ. ನಿರ್ಧಿಷ್ಟವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಜಿಲ್ಲಾ ವಿಭಜನೆ ಆಗಬೇಕು ಎಂದು ತಮ್ಮಗೂ ಆಶೆ ಇದೆ. ಜೆ.ಎಚ್‌.ಪಟೇಲರ ಅವಧಿಯಲ್ಲಿ ಎನು ಗೆಜೆಟ್ ಆಗಿದೆ ಅದು ಮುಂದುವರೆಯಬೇಕು. ಆ ಗೆಜೆಟ್ ಪ್ರಕಾರ ಮೂರು ಜಿಲ್ಲೆಗಳಾಗಬೇಕು.

6 ಮತಕ್ಷೇತ್ರಕ್ಕೊಂದು ಜಿಲ್ಲೆಗಳಾದರೆ ಒಳ್ಳೆಯದು. ಈಗಾಗಲೇ ಗದಗ, ಹಾವೇರಿ, ವಿಜಯಪೂರ, ಉಡುಪಿ ಆರು ಶಾಸಕರಿದ್ದಾರೆ. 10 ವರ್ಷಗಳಲ್ಲಿ ಮಾಡುವುದನ್ನು ಈಗಲೇ ಘೋಷಣೆ ಮಾಡಿದರೆ ಒತ್ತಡ ಕಡಿಮೆಯಾಗುತ್ತದೆ. ಜಿಲ್ಲಾಸ್ಪತ್ರೆಗೆ ಹೋಗಿ ಎಂದರೆ ಎಲ್ಲರೂ ಬೆಳಗಾವಿಗೆ ಬರಬೇಕು. ಜಿಲ್ಲೆ ವಿಭಜನೆಯಾದರೆ ಮೂರು ಜಿಲ್ಲಾಸ್ಪತ್ರೆಗಳಾಗುತ್ತವೆ. ಜನರ ಆರೋಗ್ಯದ ಹಿತದೃಷ್ಠಿಯಿಂದ ಈಗಾ ಆಸ್ಪತ್ರೆಗಳ ಬಹಳ ಮುಖ್ಯವಾಗಿದೆ ಎಂದರು.

ಸರ್ಕಾರಿ ಜಮೀನು ಬೇರೆಯವರಿಗೆ ಮಾರಾಟ ಮಾಡಿದ್ದ ಅವನ ಮೇಲೆ ಕ್ರೀಮಿನಲ್ ಪ್ರಕರಣ ದಾಖಲಿಸಿ ರದ್ದು ಮಾಡಲಾಗಿದೆ. ಅಂತಹ ಘಟನೆಗಳು ನಮ್ಮ ಗಮನಕ್ಕೆ ಬಂದರೆ ಬೀಡುವುದಿಲ್ಲ. ಅವಧಿ ಮೀರಿದ ಔಷಧಗಳನ್ನು ಈಡಬಾರದು, ಅವರು ನೋಡಬೇಕು, ಅದು ಅವರ ಜವಾಬ್ದಾರಿಯಾಗಿದೆ. ಬೆಳಗಾವಿಯಲ್ಲಿ ಮೇಲು ಸೇತುವೆ ನಿರ್ಮಾಣ ಕಾಮಗಾರಿಗೆ 120 ಕೋಟಿ ಹಣ ಸರ್ಕಾರ ಬಿಡುಗಡೆಗೊಳಿಸಿದೆ ಎಂದರು.


Spread the love

LEAVE A REPLY

Please enter your comment!
Please enter your name here