ಆನೇಕಲ್:- ಬೆಳ್ಳಂ ಬೆಳಿಗ್ಗೆ ಕ್ಯಾಂಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೆ ಟೆಕ್ಕಿ ದುರ್ಮರಣ ಹೊಂದಿದ ಘಟನೆ ಬನ್ನೇರುಘಟ್ಟ- ಜಿಗಣಿ ಮುಖ್ಯರಸ್ತೆಯ ಹರಪನಹಳ್ಳಿ ತಿರುವಿನಲ್ಲಿ ಜರುಗಿದೆ.33 ವರ್ಷದ ನರೇಶ್ ಅಪಘಾತದಲ್ಲಿ ಮೃತಪಟ್ಟ ಟೆಕ್ಕಿ ಎನ್ನಲಾಗಿದೆ. ಆಂಧ್ರ ಮೂಲದ ಚಿತ್ತೂರಿನ ನಿವಾಸಿ ನರೇಶ್ ಎನ್ನಲಾಗಿದೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಜಿಗಣಿಗೆ ಬಂದು ವಾಸವಾಗಿದ್ದರು.
ಜಿಗಣಿಯ ಕ್ಲಾಸಿಕ್ ಲೇಔಟ್ ನಲ್ಲಿ ನರೇಶ್ ಕುಟುಂಬ ವಾಸವಿತ್ತು. ಐಟಿ ಕಂಪನಿಯಲ್ಲಿ ಸಾಫ್ಟ್ವೇರ್ ಉದ್ಯೋಗಿ ಆಗಿದ್ದರು. ನಿನ್ನೇ ಚಿಕ್ಕಪ್ಪನ ಮನೆಗೆ ಹೋಗಿ ಬೆಳಿಗ್ಗೆ ಜಿಗಣಿಗೆ ಟೆಕ್ಕಿ ವಾಪಸ್ ಆಗುತ್ತಿದ್ದ. ಹರಪನಹಳ್ಳಿ ಬಳಿ ಕ್ಯಾಂಟರ್ ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಕ್ಯಾಂಟರ್ ಚಾಲಕ ಅಜಾಗರುಕತೆಯಿಂದ ತಿರುವು ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಕ್ಯಾಂಟರ್ ಮುಂಬದಿಗೆ ಬೈಕ್ ಡಿಕ್ಕಿಯಾಗಿ ನರೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಹೆಂಡತಿ ಇಬ್ಬರು ಮಕ್ಕಳು ಅನಾಥರಾಗಿದ್ದು, ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.