ಬಳ್ಳಾರಿ: ನಾಗರ ಹಾವು ಕಚ್ಚಿ ಬಾಲಕಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ತಾಲೂಕಿನ ಹೊಸ ಮೋಕಾ ಗ್ರಾಮದಲ್ಲಿ ನಡೆದಿದೆ. ಶ್ರಾವಣಿ(13) ಮೃತ ಬಾಲಕಿಯಾಗಿದ್ದು, ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಬಾಲಕಿಗೆ ಮೂರು ಬಾರಿ ಹಾವು ಹಚ್ಚಿದೆ.
Advertisement
ಕೈ ಮತ್ತು ಕಾಲಿಗೆ ಕಚ್ಚಿದ ನಾಗರ ಹಾವ ಕಡಿದರೂ ಎಚ್ಚರವಾಗದೇ ಬಾಲಕಿ ಮಲಗಿದ್ದಾಳೆ. ಬೆಳಗ್ಗೆ ಬಾಲಕಿ ಮೃತಳಾಗಿದ್ದಾಳೆ. ಇನ್ನೂ ಬೆಳಗ್ಗೆಯಾದರೂ ಸಹ ನಾಗರಹಾವು ಮನೆಯಲ್ಲೇ ಇದೆ.
ಹೊಸ ಮೋಕಾ ಗ್ರಾಮದ ಲಕ್ಷ್ಮಣ ಹಾಗೂ ಶೇಕಮ್ಮ ಎನ್ನುವ ದಂಪತಿಯ ಮಗಳು ಶ್ರಾವಣಿ, ತೀವ್ರ ಬಡತನ ಹಿನ್ನೆಲೆ ಹಳೆ ಮನೆಯಲ್ಲಿ ವಾಸವಾಗಿದ್ದರು. ಮಗಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.