ಬಳ್ಳಾರಿ:- ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಳ್ಳಾರಿಯ ಕಣೇಕಲ ರಸ್ತೆಯ ರಾಣಿತೋಟ ಏರಿಯಾದಲ್ಲಿ ಜರುಗಿದೆ.
Advertisement
37 ವರ್ಷದ ವೆಂಕಟೇಶ ಗೊಲ್ಲರ್ ಕೊಲೆಗೀಡಾದ ವ್ಯಕ್ತಿ. ಇಲ್ಲಿನ ರಾಣಿತೋಟದ ಜುಮ್ಮಾಮಸೀದಿ ಮುಂಭಾಗದಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಮೃತ ವ್ಯಕ್ತಿಯು, ಆರ್ ಜೆ ಕಾಟನ್ ಮಿಲ್ ಇಂಡಸ್ಟ್ರಿನಲ್ಲಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಇದೀಗ ತನ್ನ ಮೂವರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮುಂದಿನ ತನಿಖೆ ಕೈಗೊಂಡಿದ್ದಾರೆ.