ಬಳ್ಳಾರಿ: ಸ್ವಾತಂತ್ರ್ಯ ದಿನದಂದೇ ಪಿಎಸ್ಐ ಕೆ.ಕಾಳಿಂಗ ಅವರ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿಯ ಮೋಕಾದಲ್ಲಿನ ಮನೆಯೊಂದರಲ್ಲಿ ನಡೆದಿದೆ.
Advertisement
ಚೈತ್ರಾ (36) ಮೃತ ದುರ್ಧೈವಿಯಾಗಿದ್ದು, ಮಕ್ಕಳು ಹಾಗೂ ಪತಿಯನ್ನ ಧ್ವಜಾರೋಹಣಕ್ಕೆ ಕಳಿಸಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚೈತ್ರಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ.