ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ದರೋಜಿ ಕರಡಿಧಾಮದ ಅರಣ್ಯ ಪ್ರದೇಶದಲ್ಲಿ ಅಪರೂಪದ ಭಾರತೀಯ ಸ್ಕಾಪ್ಸ್ ಗೂಬೆ ಪತ್ತೆಯಾಗಿದ್ದು, ಪಕ್ಷಿಪ್ರೇಮಿಗಳಲ್ಲಿ ಸಂಭ್ರಮ ಮೂಡಿಸಿದೆ.
Advertisement
ಚಿಕ್ಕ ಗಾತ್ರದ ಈ ಗೂಬೆಯು ಸುಮಾರು 20 ರಿಂದ 25 ಸೆಂ.ಮೀ. ಉದ್ದದ, ಬೂದು ಬಣ್ಣದ ದೇಹ ಹಾಗೂ ಕಡು ಕಣ್ಣುಗಳನ್ನು ಹೊಂದಿದೆ. ದೇಹದ ಬಣ್ಣ ಸುತ್ತಮುತ್ತಲಿನ ಪರಿಸರಕ್ಕೆ ಬೆರೆತುಹೋಗುವುದರಿಂದ ಹಗಲಿನಲ್ಲಿ ಪತ್ತೆ ಹಚ್ಚುವುದು ಕಷ್ಟ.
‘ವಟ್-ವಟ್’ ಶಬ್ದದಿಂದ ಗೂಬೆಯಿರುವ ಸ್ಥಳವನ್ನು ಗುರುತಿಸಿದ ಪಕ್ಷಿಪ್ರೇಮಿಗಳಾದ ಸಬ್ಯಸಾಚಿ ರಾಯ್, ಶ್ರೀಧರ್ ಪೆರುಮಾಳ್ ಮತ್ತು ಪಂಪಯ್ಯ ಸ್ವಾಮಿ ಮಳೆಮಠ ಅವರು ಹಲವು ಗಂಟೆಗಳ ಶ್ರಮದ ನಂತರ ಗೂಬೆಯ ಚಿತ್ರವನ್ನು ಸೆರೆಹಿಡಿದರು.
ದರೋಜಿ ಕರಡಿಧಾಮದಲ್ಲಿ ಈ ಜಾತಿಯ ಗೂಬೆಯು ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಇದು ಸ್ಥಳೀಯ ಪಕ್ಷಿ ಜೀವಜಗತ್ತಿಗೆ ಹೊಸ ಸೇರ್ಪಡೆ ಆಗಿದೆ ಎಂದು ತಜ್ಞರು ತಿಳಿಸಿದ್ದಾರೆ.