ಜೆಡಿಎಸ್ ಜಿಲ್ಲಾಧ್ಯಕ್ಷರಿಂದ ಬೆಲ್ಟ್, ಟೈ ವಿತರಣೆ

0
Belt tie distribution by JDS district president
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ 100 ವರ್ಷ ಪೂರೈಸಿದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ನಂ. 2ರಲ್ಲಿ ಗದಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ವೈ. ಮುಧೋಳ ಶಾಲೆಯ ಎಲ್ಲಾ ಮಕ್ಕಳಿಗೆ ಅನುಕೂಲವಾಗುವಂತೆ ಬೆಲ್ಟ್ ಹಾಗೂ ಟೈಗಳನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ದಲಬಂಜನ ಅವರ ನೇತೃತ್ವದಲ್ಲಿ ವಿತರಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರಿ ಕನ್ನಡ ಶಾಲೆಗಳಲ್ಲಿ ಹೆಚ್ಚಿನ ಬಡತನ ಹೊಂದಿರುವ ಮಕ್ಕಳು ಇರುವುದರಿಂದ ಅವರಿಗೆ ಅನುಕೂಲವಾಗಲೆಂದು ಒಂದು ಸಣ್ಣ ಅಳಿಲು ಸೇವೆ ರೂಪದಲ್ಲಿ ಈ ಸೇವೆ ಸಲ್ಲಿಸಿದ್ದೇನೆ. ನೀಡಿದ್ದೇನೆ. ಮುಂದೆ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಮಕ್ಕಳಿಗೆ ಬಹುಮಾನ ವಿತರಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಈರಣ್ಣ ಬಾಳಿಕಾಯಿ, ಹಾಜಿಅಲಿ ಎಚ್.ಕೊಪ್ಪಳ, ತಿಪ್ಪಣ್ಣ ಹುಡ್ಡೆದ, ಬಾದಷಹ ಭಗವಾನ, ರವಿ ಮೋಹಿತೆ, ಶಾಲೆಯ ಎಲ್ಲಾ ಗುರುಗಳು, ಗುರುಮಾತೆಯರು ಹಾಗೂ ಶಾಲೆಯ ಎಲ್ಲಾ ಮಕ್ಕಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here