ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ, ಶಾಲಾ ಘಟಕದ ಸಹಯೋಗದಲ್ಲಿ ಪಟ್ಟಣದ ದಿ ಯುನಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೆ.7ರಂದು ಮಧ್ಯಾಹ್ನ 3ಕ್ಕೆ ವರಕವಿ ದ.ರಾ ಬೇಂದ್ರೆ ಅವರ 130ನೇ ಜನ್ಮದಿನದ ಪ್ರಯುಕ್ತ ಬೇಂದ್ರೆ ಗಾನಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದ.ರಾ. ಬೇಂದ್ರೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ರಾಮಗಿರಿ ಸಂಸ್ಥಾಪಕ ಅಧ್ಯಕ್ಷರಾದ ಡಾ. ಎಸ್.ವಿ. ತಮ್ಮನಗೌಡ್ರ ಮತ್ತು ಮುಖ್ಯೋಪಾಧ್ಯಾಯ ಅರವಿಂದ ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸುವರು.
ಸಾಹಿತಿ ರಮೇಶ ನವಲೆ ಆಶಯ ಗಾನ ನುಡಿಯುವರು. ದಿಗಂಬರ ಪೂಜಾರ, ನಾಗರಾಜ ಹಣಗಿ, ಕರಿಯಪ್ಪ ಶಿರಹಟ್ಟಿ ಮತ್ತು ಕಸಾಪ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿರುವರು. ಮಲ್ಲು ಕಳಸಾಪುರ, ಸಂತೋಷ ಗುಡಗೇರಿ, ನಾಗವೇಣಿ ಅಂಬಿಗೇರ ಬೇಂದ್ರೆ ಕವನಗಳನ್ನು ಹಾಡುವರು. ಕಸಾಪ ತಾಲೂಕಾ ಅಧ್ಯಕ್ಷ ಈಶ್ವರ ಮೆಡ್ಲೇರಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.