ಬೆಂಗಳೂರು:- ಬೆಂಗಳೂರು ದಕ್ಷಿಣ ನಗರಪಾಲಿಕೆ ಅಧಿಕಾರಿಗಳು ನಿಯಮ ಪಾಲಿಸದ ಪೇಯಿಂಗ್ ಗೆಸ್ಟ್ ವಸತಿಗೃಹಗಳ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಿದ್ದಾರೆ.
ಒಟ್ಟು 89 ಪಿಜಿಗಳಿಗೆ 61 ಸಾವಿರ ರೂಪಾಯಿ ದಂಡ ವಿಧಿಸಲಾಗಿದ್ದು, 19 ಪಿಜಿಗಳ ಅಡುಗೆ ಕೋಣೆಗಳಿಗೆ ಬೀಗ ಜಡಿಸಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪರಿಶೀಲನೆ ವೇಳೆ ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನಗಳು, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ ನೀಡುವ ಆಹಾರ ಸುರಕ್ಷತಾ ಪ್ರಮಾಣಪತ್ರ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಲಾಯಿತು.
ಅನೇಕ ಪಿಜಿಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿ ದಂಡ ವಿಧಿಸಲಾಗಿದೆ.
ಪ್ರದೇಶವಾರು ವಿವರ:
ಪದ್ಮನಾಭನಗರ – 3 ಪಿಜಿ ತಪಾಸಣೆ – ₹5,000 ದಂಡ.
ಜಯನಗರ – 13 ಪಿಜಿ ತಪಾಸಣೆ – ₹11,000 ದಂಡ – 3 ಪಿಜಿ ಕಿಚನ್ಗೆ ಬೀಗ.
ಬೆಂಗಳೂರು ದಕ್ಷಿಣ – 18 ಪಿಜಿ ತಪಾಸಣೆ – ₹9,000 ದಂಡ – 4 ಪಿಜಿ ಕಿಚನ್ಗೆ ಬೀಗ.
ಬಿಟಿಎಂ ಲೇಔಟ್ – 24 ಪಿಜಿ ಪರಿಶೀಲನೆ – 3 ಪಿಜಿ ಕಿಚನ್ಗೆ ಬೀಗ.
ಬೊಮ್ಮನಹಳ್ಳಿ – 32 ಪಿಜಿ ಪರಿಶೀಲನೆ – ₹39,000 ದಂಡ –
9 ಪಿಜಿ ಕಿಚನ್ಗೆ ಬೀಗ.
ಒಟ್ಟು 89 ಪಿಜಿಗಳಿಗೆ ದಂಡ ವಿಧಿಸಲಾಗಿದ್ದು, 19 ಪಿಜಿ ಅಡುಗೆ ಕೋಣೆಗಳಿಗೆ ಬೀಗ ಜಡಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.



