ಬೆಂಗಳೂರು: ಕುಡಿದ ಮತ್ತಿನಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಕೆಂಗೇರಿಯಲ್ಲಿ ನಡೆದಿದೆ.
ಗೆಳೆಯನಿಗೆ ಚಾಕು ಇರಿದು ನಾಟಕವಾಡಿದ್ದ ವ್ಯಕ್ತಿ ಬಂಧನವಾಗಿದ್ದು, ಮಾದೇಶ್ ಬಂಧಿತ ಆರೋಪಿಯಾಗಿದ್ದಾನೆ. ಸ್ನೇಹಿತ ರಾಜಕುಮಾರ್ ಗೆ ಚಾಕು ಇರಿದಿದ್ದ ಆರೋಪಿಯಾಗಿದ್ದು, ಇದೇ ತಿಂಗಳ 5ರಂದು ಕೆಂಗೇರಿಯಲ್ಲಿ ಕೊಲೆಯಾಗಿದ್ದು, ವೃತ್ತಿಯಲ್ಲಿ ಇಬ್ಬರು ಕ್ಯಾಬ್ ಚಾಲಕರಾಗಿದ್ದರು.
ಎಣ್ಣೆ ಹೊಡೆಯಲೆಂದು ಮೀಟ್ ಆಗಿದ್ದ ಇಬ್ಬರು ಅಂಗಡಿಯಲ್ಲಿ ಎಣ್ಣೆ ಖರೀದಿಸಿ ನಿರ್ಜನ ಪ್ರದೇಶಕ್ಕೆ ತೆರಳಿ ಮದ್ಯ ಸೇವನೆ ಮಾಡಿದ್ದರು.
ಈ ವೇಳೆ ಶುರುವಾದ ಜಗಳದಲ್ಲಿ ಮಾತಿಗೆ ಮಾತು ಬೆಳೆದಿತ್ತು. ಮಾದೇಶನ ಕುಟುಂಬ ಹಾಗೂ ಮಕ್ಕಳ ಬಗ್ಗೆ ನಿಂದಿಸಿದ್ದ ರಾಜಕುಮಾರ್, ಈ ವೇಳೆ ಮಾದೇಶ್ ತನ್ನ ಕಾರ್ನಲ್ಲಿದ್ದ ಚಾಕುವಿನಿಂದ ಎದೆ ಭಾಗಕ್ಕೆ ಇರಿದಿದ್ದ.
ಚಾಕುವಿನಿಂದ ಚುಚ್ಚಿ ತಾನೇ ಆಸ್ಪತ್ರೆಗೆ ಕರೆದೊಯ್ದ ಮಾದೇಶ್, ಈ ವೇಳೆ ಸಂಬಂಧಿಕರಿಗೆ ಯಾರೋ ಅಪರಿಚಿತರು ಕೃತ್ಯ ಎಸಗಿದ್ದಾಗಿ ಹೇಳಿದ್ದ. ಆಸ್ಪತ್ರೆ ಬಳಿ ಆತನ ಸಾವಿನ ಸುದ್ದಿ ಏಳುತಿದ್ದಂತೆ ಪರಾರಿಯಾಗಿದ್ದ ಮಾದೇಶ.
ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೆಂಗೇರಿ ಪೊಲೀಸರು ತನಿಖೆ ವೇಳೆ ಅಸಲಿ ಸಂಗತಿ ಬಯಲಾಗಿತ್ತು. ನಾಪತ್ತೆಯಾಗಿದ್ದ ಮಾದೇಶನ ಬಂಧಿಸಿರುವ ಕೆಂಗೇರಿ ಪೊಲೀಸರು, ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಚುರುಕುಗೊಂಡಿದೆ.