ಬೆಂಗಳೂರು:- ಸೋಲದೇವನಹಳ್ಳಿಯ ಪಿಜಿಯಲ್ಲಿ ಡೆತ್ ನೋಟ್ ಬರೆದಿಟ್ಟು ಯುವತಿ ನೇಣಿಗೆ ಶರಣಾಗಿರುವ ಘಟನೆ ಜರುಗಿದೆ.
ವತ್ಸಲಾ (19) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಹಾಸನ ಮೂಲದವರು ಎಂದು ತಿಳಿದು ಬಂದಿದೆ. ಈಕೆ ಅಂತಿಮ ವರ್ಷದ ಬಿ ಫಾರ್ಮ್ ವ್ಯಾಸಾಂಗ ಮಾಡುತ್ತಿದ್ದಳು. ಪಿಜಿಯಲ್ಲಿದ್ದು ಬೆಳಿಗ್ಗೆಯಿಂದ 8 ಪುಟಗಳ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಡೆತ್ ನೋಟ್‌ನಲ್ಲಿ ನನಗೆ ನಿಮ್ಮ ಪ್ರೀತಿಗೆ ಅರ್ಹಳಲ್ಲ ಅಪ್ಪ. ನೀವು ಕೊಟ್ಟಿರುವ ಪ್ರೀತಿ ಇನ್ಯಾರಿಂದಲೂ ಕೊಡಲು ಸಾಧ್ಯವಿಲ್ಲ. ಕೇಳಿದ್ದನ್ನೆಲ್ಲಾ ಕೊಡಿಸಿದ್ದೀರಿ. ಅಪ್ಪ ನಿಮ್ಮ ಮರ್ಯಾದೆ ತೆಗೆಯುವ ಕೆಲಸ ನಾನು ಮಾಡಿಲ್ಲ. ಅಪ್ಪ ನಿಮ್ಮ ಪ್ರೀತಿ ಉಳಿಸಿಕೊಳ್ಳುವ ಭಾಗ್ಯ ನನಗಿಲ್ಲ ಎಂಬ ಸಾಲುಗಳೊಂದಿಗೆ ಪ್ರಾರಂಭಿಸಿ ನಾನು ಪ್ರೀತಿಸಿದ ಹುಡುಗನಿಗೂ ಮೋಸ ಮಾಡಲು ನನಗೆ ಇಷ್ಟವಾಗುತ್ತಿಲ್ಲ. ಹೀಗಾಗಿ ನಾನು ಸಾವಿಗೆ ಶರಣಾಗುತ್ತಿದ್ದೇನೆ ಎಂದು 8 ಪುಟಗಳ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.
ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.


