ಬೆಂಗಳೂರು:– ಮಲ್ಲೇಶ್ವರಂ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಮಿನಿ ಲಾರಿಯೊಂದು ಕಾಂಡಿಮೆಂಟ್ಸ್ ಗೆ ನುಗ್ಗಿದ ಘಟನೆ ಜರುಗಿದೆ.
Advertisement
ಇಂದು ಬೆಳಗಿನ ಜಾವ ಸುಮಾರು 4.40ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಅಪಘಾತಕ್ಕೀಡಾದ ಮಿನಿ ಲಾರಿಯು, ಮಲ್ಲೇಶ್ವರಂನ ಲಿಂಕ್ ರಸ್ತೆಯ ಮೂಲಕ ತೆರಳುತ್ತಿತ್ತು. ಈ ವೇಳೆ ಚಾಲಕನ ಕಂಟ್ರೋಲ್ ತಪ್ಪಿ ಫುಟ್ ಪಾತ್ ಹತ್ತಿಸಿ ಕಾಂಡಿಮೆಂಟ್ಸ್ ಗೆ ನುಗ್ಗಿದೆ. ಘಟನೆ ಬಳಿಕ ಲಾರಿ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಘಟನೆಯಲ್ಲಿ ಯಾವುದೇ ಪ್ರಾಣಪಾಯ ಆಗಿಲ್ಲ.
ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಕ್ರೇನ್ ತರಿಸಿ ವಾಹನ ತೆರವುಗೊಳಿಸಿದ್ದಾರೆ.