ಬೆಂಗಳೂರು:- ಗ್ರಾಹಕನಂತೆ ಬಂದು ಚಿನ್ನದ ಉಂಗುರ ಎಗರಿಸಿದ ಆರೋಪಿಯನ್ನು
ಬೆಂಗಳೂರಿನ ಜ್ಞಾನಭಾರತಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರಾಜೇಶ್ ಬಂಧಿತ ಆರೋಪಿ. ಆರೋಪಿಯು, ಭುವನೇಶ್ವರಿ ನಗರದ ಶ್ರೀ ಗಣೇಶ್ ಗೋಲ್ಡ್ ಪ್ಯಾಲೇಸ್ ನಲ್ಲಿ ಮಾಲೀಕರ ಗಮನ ಬೇರೆಡೆ ಸೆಳೆದು ಕೃತ್ಯ ಎಸಗಿದ್ದ. ನಕಲಿ ಉಂಗುರವನ್ನ ಇಟ್ಟು ಅದೇ ಮಾದರಿಯ ಅಸಲಿ ಉಂಗುರವನ್ನ ಆರೋಪಿ ದೋಚಿದ್ದ. ಬೇರೆ ಗ್ರಾಹಕರ ಜೊತೆ ಮಾತನಾಡುವಾಗ ಟ್ರೇ ನಲ್ಲಿದ್ದ ಉಂಗುರ ಬದಲಿಸಿದ್ದ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇದೀಗ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಯಿಂದ ಸುಮಾರು 2 ಲಕ್ಷ 30 ಸಾವಿರ ಬೆಲೆಬಾಳುವ 22.37 ಗ್ರಾಂ ತೂಕದ ಉಂಗುರ ಹಾಗೂ ಚಿನ್ನದ ಬಿಸ್ಕೆಟ್ ಗಳ ವಶಕ್ಕೆ ಪಡೆಯಲಾಗಿದೆ. ಆರೋಪಿಯ ವಿರುದ್ಧ ಬೇರೆ ಬೇರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೈಲಿಗೆ ಹೋಗಿ ಬಂದಿದ್ರೂ ಆರೋಪಿ ತನ್ನ ಚಾಳಿ ಮುಂದುವರಿಸಿದ್ದ.
ಸದ್ಯ ಆರೋಪಿಯನ್ನ ಬಂಧಿಸಿ ಪೋಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.


