ಬೆಂಗಳೂರು: ಯಾರು ಇಲ್ಲದಿರೊ ಮನೆ ನೋಡಿ ಸಂಚು ಹಾಕಿ ಮನೆಗೆ ಕನ್ನ ಹಾಕುತ್ತಿದ್ದ ಇಬ್ಬರು ಆಸಾಮಿಗಳನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ರಘು @ ಪೆಪ್ಸಿ (26) ಕಾರ್ತಿಕ್ @ ಎಸ್ಕೇಪ್ ಕಾರ್ತಿಕ್ (36) ಬಂಧಿತ ಆರೋಪಿಗಳು, ಕೆ.ಎಸ್.ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪೈಜ್ ಮಸೀದಿ ಸಮೀಪದ ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡಿದ್ದರು.
Advertisement
ಮನೆ ಮಾಲೀಕನ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮೊದಲು ಆರೋಪಿ ಕಾರ್ತಿಕ್‌ನನ್ನು ಬಂಧಿಸಿದ್ದರು. ನಂತರ ಸ್ನೇಹಿತ ರಘುವನ್ನು ಬಂಧಿಸಿದ್ದಾರೆ. ಅಡವಿಟ್ಟಿದ್ದ ಆಭರಣ ಸೇರಿ ಒಟ್ಟು 470 ಗ್ರಾಂ ಚಿನ್ನಾಭರಣ ಮತ್ತು 3 ಕೆ.ಜಿ.ಬೆಳ್ಳಿಯ ಗಟ್ಟಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.