ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಈ ರಸ್ತೆಗಳಲ್ಲಿ ಇಂದಿನಿಂದ ಆ.11ರವರೆಗೆ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ವೈಟ್ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಳಗೆರೆ ಟಿ ಜಂಕ್ಷನ್‌ನಿಂದ ಪಣತ್ತೂರು ರೈಲ್ವೆ ಬ್ರಿಡ್ಜ್ ಜಂಕ್ಟನ್‌ವರೆಗೆ ಬಿಬಿಎಂಪಿ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗಿದೆ. ಹೀಗಾಗಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಕೋರಿದ್ದಾರೆ.
ವಾಹನ ಸಂಚಾರ ನಿರ್ಬಂಧವಾಗುವ ರಸ್ತೆಗಳು:
* ಪಣತ್ತೂರು ರೈಲ್ವೆ ಬ್ರಿಡ್ಜ್ ರಸ್ತೆಯಿಂದ ಬಳಗೆರೆ ಟಿ ಜಂಕ್ಷನ್ವರೆಗೆ.
ಪರ್ಯಾಯ ಮಾರ್ಗಗಳು ಹೀಗಿದೆ:
* ಪಣತ್ತೂರು ಕಡೆಯಿಂದ ಬಳಗೆರೆ ಕಡೆಗೆ ಹೋಗುವ ವಾಹನ ಸವಾರರು ಪಣತ್ತೂರು ದಿಣ್ಣೆ ರಸ್ತೆಯಲ್ಲಿ ಚಲಿಸಿ ಪಣತ್ತೂರು ದಿಣ್ಣೆ ಬಳಿ ಎಡ ತಿರುವು ಪಡೆದು ಸಿಲ್ವರ್ ಓಕ್ ರಸ್ತೆಯಿಂದ ಬಳಗೆರೆ, ವಿಬ್‌ಗಯಾರ್ ರಸ್ತೆ ಮತ್ತು ವರ್ತೂರು ಕಡೆಗೆ ಸಂಚರಿಸಬಹುದಾಗಿದೆ.
* ಬಳಗೆರೆ ಟಿ ಜಂಕ್ಷನ್ ಕಡೆಯಿಂದ ಪಣತ್ತೂರು ಕಡೆಗೆ ಹೋಗುವ ವಾಹನ ಸವಾರರು ಪಣತ್ತೂರು ದಿಣ್ಣೆ ರಸ್ತೆ, ವಿಬ್‌ಗಯಾರ್ ರಸ್ತೆ ಹಾಗೂ ಮೂಲಕ ಮಾರತ್ತಹಳ್ಳಿ ಬ್ರಿಡ್ಜ್ ಪಣತ್ತೂರು ಕಡೆಗೆ ಸಂಚರಿಸಬಹುದಾಗಿದೆ.