Bengaluru: 35 ಕೋಟಿ ಮೌಲ್ಯದ ಸಿಎ ಸೈಟ್‌ ವಶಕ್ಕೆ ಪಡೆದ ಬಿಡಿಎ!

0
Spread the love

ಬೆಂಗಳೂರು:- ಬಿಡಿಎ ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 35 ಕೋಟಿ ಮೌಲ್ಯದ ಸಿಎ ಸೈಟ್‌ ವಶಕ್ಕೆ ಪಡೆದಿದೆ.

Advertisement

ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರಿಸಿರುವ ಬಿಡಿಎ, ಬನಶಂಕರಿ 2ನೇ ಹಂತ ಬಡಾವಣೆಯಲ್ಲಿ ನಾಗರಿಕ ಸೌಲಭ್ಯ ನಿವೇಶನವನ್ನು ವಶಪಡಿಸಿಕೊಂಡಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಕತ್ರಿಗುಪ್ಪೆ ಗ್ರಾಮದ ಸರ್ವೆ ನಂ. 15/1ರಲ್ಲಿನ 18513 ಚದರ ಅಡಿಯ ಪ್ರದೇಶದಲ್ಲಿ ಅನಧಿಕೃವಾಗಿ ನಿರ್ಮಾಣವಾಗಿದ್ದ ಶೆಡ್, ಹಳೇ ಗುಜರಿ ವಾಹನಗಳನ್ನು ತೆರವುಗೊಳಿಸಿ, ಸುಮಾರು 35 ಕೋಟಿ ರೂ. ಮೌಲ್ಯದ ಸಿಎ ನಿವೇಶನಗಳನ್ನು ಪ್ರಾಧಿಕಾರವು ವಶಪಡಿಸಿಕೊಂಡಿದೆ.


Spread the love

LEAVE A REPLY

Please enter your comment!
Please enter your name here