HomeUncategorizedBengaluru: ರಾಜಧಾನಿ ಮಂದಿಗೆ ಬಿಗ್ ಶಾಕ್- ನಾಳೆಯಿಂದ ರಸಕ್ಕೆ ಸೆಸ್ ಜಾರಿ!

Bengaluru: ರಾಜಧಾನಿ ಮಂದಿಗೆ ಬಿಗ್ ಶಾಕ್- ನಾಳೆಯಿಂದ ರಸಕ್ಕೆ ಸೆಸ್ ಜಾರಿ!

For Dai;y Updates Join Our whatsapp Group

Spread the love

ಬೆಂಗಳೂರು:- ನಾಳೆಯಿಂದ ಅಂದ್ರೆ ಏಪ್ರಿಲ್ 1 ರಿಂದ ಬೆಂಗಳೂರಿನಲ್ಲಿ ಕಸದ ಮೇಲೆ ಸೆಸ್ ಜಾರಿ ಆಗಲಿದೆ.

ಮನೆ ಮನೆ ಕಸ ಸಂಗ್ರಹಿಸಲು ಇನ್ನೂ ಮುಂದೆ ತೆರಿಗೆ ಕಟ್ಟಬೇಕು. ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯಿಂದ ಕಸದ ಮೇಲೆ ಸೆಸ್ ವಿಧಿಸಲಾಗಿದೆ. ಪ್ರತಿ ತಿಂಗಳು ಕಸ ಸಂಗ್ರಹ ಹಾಗೂ ವಿಲೇವಾರಿ ವೆಚ್ಚ ಎಂದು ವಸೂಲಿ ಮಾಡಲು ಬಿಬಿಎಂಪಿ ಮುಂದಾಗಿದೆ. ಅಂಗಡಿ, ಹೋಟೆಲ್‍ಗಳಿಗೆ ಒಂದು ತೆರಿಗೆ, ರೆಸಿಡೆನ್ಷಿಯಲ್ ಕಟ್ಟಡಗಳಿಗೆ ಮತ್ತೊಂದು ರೀತಿ ಕಸದ ಸೆಸ್ ವಿಧಿಸಲು ನಿರ್ಧರಿಸಲಾಗಿದೆ.

ಹೋಟೆಲ್‍ಗಳಿಗೆ ಮೊದಲು ಒಂದು ಕೆಜಿ ಕಸಕ್ಕೆ 5 ರೂ. ನಿಗದಿ ಮಾಡಲಾಗಿತ್ತು. ಈಗ 12 ರೂ.ಗೆ ಏರಿಸಲಾಗಿದೆ. ರೆಸಿಡೆನ್ಸಿಯಲ್ ಕಟ್ಟಡಗಳಿಗೆ ಕಟ್ಟಡದ ಚದರ ಅಡಿ ಲೆಕ್ಕದಲ್ಲಿ ಕಸಕ್ಕೆ ಸೆಸ್ ಹಾಕಲಿದ್ದಾರೆ. ಆಸ್ತಿ ತೆರಿಗೆಯಲ್ಲಿ ಕಸದ ತೆರಿಗೆಯನ್ನು ವಾರ್ಷಿಕವಾಗಿ ಬಿಬಿಎಂಪಿ ವಸೂಲಿ ಮಾಡಲಿದೆ.

ಎಷ್ಟು ಚದರ ಕಟ್ಟಡಕ್ಕೆ ಎಷ್ಟು ತೆರಿಗೆ?
600 ಚದರ ಅಡಿವರೆಗಿನ ಕಟ್ಟಡಗಳಿಗೆ ತಿಂಗಳಿಗೆ 10 ರೂ.
600 ಚದರ ದಿಂದ 1000 ಚದರವರೆಗಿನ ಕಟ್ಟಡಗಳಿಗೆ ತಿಂಗಳಿಗೆ 50 ರೂ.
1 ಸಾವಿರದಿಂದ 2 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 100 ರೂ.
2 ಸಾವಿರದಿಂದ 3 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 150 ರೂ.
3 ಸಾವಿರ ದಿಂದ 4 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 200 ರೂ.
4 ಸಾವಿರ ಚದರ ಅಡಿಗಳ ಮೇಲ್ಪಟ್ಟ ಕಟ್ಟಡಗಳಿಗೆ ತಿಂಗಳಿಗೆ 400 ರೂ.

ಏ.1ರಿಂದ ಅನ್ವಯವಾಗುತ್ತೆ ಕಸಕ್ಕೆ ಸೆಸ್!

ಬಿಬಿಎಂಪಿ ಮಂಡಿಸಿರೋ ₹19,927 ಕೋಟಿ ಮೊತ್ತದ ಬಜೆಟ್​​​ ಕುರಿತು ಪರ-ವಿರೋಧ ಚರ್ಚೆ ಶುರುವಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಜನಾನುರಾಗಿ ಯೋಜನೆಗಳೇನು ಇಲ್ಲವಾದರೂ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಪಾಲಿಕೆ ಒತ್ತು ಕೊಟ್ಟಿದೆ. ಆದರೆ ಇದೆಲ್ಲದರ ನಡುವೆ ಸದ್ದಿಲ್ಲದೇ ಬೆಂಗಳೂರು ಜನರಿಗೆ ತ್ಯಾಜ್ಯ ವಿಲೇವಾರಿ ಹೆಸರಿನಲ್ಲಿ ಗಾರ್ಬೇಜ್ ಸೆಸ್​​​​ ಸಂಗ್ರಹ ಘೋಷಣೆ ಮಾಡಿದೆ. ಬೆಳೆಯುತ್ತಿರುವ ಬೆಂಗಳೂರನ್ನು ನಿಭಾಯಿಸಲು ಈ ರೀತಿಯ ಕ್ರಮಗಳು ಅಗತ್ಯ ಎಂದು ಬಿಬಿಎಂಪಿ ತನ್ನ ನಡೆ ಸಮರ್ಥಿಸಿಕೊಂಡಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!