ಬೆಂಗಳೂರು:- ಕರ್ನಾಟಕದ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆ ವಿರುಧ್ದ ರೋಗಿಗಳು ಅಸಮಾಧಾನ ಹೊರಹಾಕಿದ್ದಾರೆ.
ಎಸ್, ಆಸ್ಪತ್ರೆಯಲ್ಲಿ ಬ್ಲಡ್ ರಿಪೋರ್ಟ್ ಪಡೆಯೋಕೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದು ತಿಂಗಳಾದ್ರೂ ಬ್ಲಡ್ ರಿಪೋರ್ಟ್ ಸಿಗ್ತಿಲ್ಲ ಅಂತ ರೋಗಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ರಕ್ತ ಕೊಟ್ರು ಲ್ಯಾಬ್‍ಗೆ ಕಳಿಸದೇ, ಗುಡುಸಾಗಿದೆ ಅಂತ ಮತ್ತೆ ಮತ್ತೆ ಬ್ಲಡ್ ಬೇಕೆಂದು ಲ್ಯಾಬ್ ಸಿಬ್ಬಂದಿ ಹೇಳುತ್ತಿದ್ದಾರೆ ಎಂದು ರೋಗಿಗಳು ಆರೋಪಿಸಿದ್ದಾರೆ.
4-5 ಬಾರಿ ಬ್ಲಡ್ ಕೊಟ್ರು ರಿಪೋರ್ಟ್ ಬರಲ್ಲ ಅಂದರೆ ಏನು ಹೇಳಬೇಕು ಚಿಕಿತ್ಸೆ ಪಡೆಯೋದು ಹೇಗೆ ಎಂಬ ಪ್ರಶ್ನೆ ಮಾಡ್ತಾ ಇದ್ದಾರೆ. ಬ್ಲಡ್ ತೆಗೆದುಕೊಂಡ ವೈದ್ಯಕೀಯ ಸಿಬ್ಬಂದಿ ಲ್ಯಾಬ್‍ಗೆ ಕಳಿಸೋದು ತಡ ಆಗ್ತಿದೆ. ಹಾಗಾಗಿ ಬ್ಲಡ್ ಹೆಪ್ಪುಗಟ್ಟಿ ರಿಪೋರ್ಟ್ ಬರ್ತಿಲ್ಲ. ಲ್ಯಾಬ್ ಸಿಬ್ಬಂದಿ ಚುರುಕಾಗಿ ಕೆಲಸ ಮಾಡ್ತಿಲ್ಲ. ಮತ್ತೆ ಓವರ್ ಲೋಡ್ ಆಗಿ ಈ ರೀತಿ ಆಗ್ತಾ ಇರಬಹುದು. ತುಂಬಾ ಕಷ್ಟ ಆಗ್ತಿದೆ. ಬ್ಲಡ್ ರಿಪೋರ್ಟ್ ಬೇಗ ಸಿಗುವಂತೆ ಮಾಡಬೇಕು ಎಂದು ರೋಗಿಗಳು ಆಕ್ರೋಶ ಹೊರ ಹಾಕಿದ್ದಾರೆ.
ವಿಕ್ಟೋರಿಯಾ ಅಂತಾ ದೊಡ್ಡ ಆಸ್ಪತ್ರೆಯಲ್ಲಿ ಬ್ಲಡ್ ರಿಪೋರ್ಟ್ ಸಿಗಲ್ಲ ಅಂದರೆ ಚಿಕಿತ್ಸೆಗೆ ಸಮಸ್ಯೆ ಆಗುತ್ತೆ. ಬ್ಲಡ್ ಚೆಕಪ್‍ನಲ್ಲಿ ಲೋಪದೋಷಗಳು ಇದ್ದರೆ ಆಸ್ಪತ್ರೆ ಆಡಳಿತ ಮಂಡಳಿ ಸರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


