ಬೆಂಗಳೂರು:- ಬಸವೇಶ್ವರ ನಗರದ ಶಿವನಹಳ್ಳಿ 1ನೇ ಕ್ರಾಸ್ ಬಳಿ ಮನೆಯ ಬೇಸ್ಮೆಂಟ್‌ನಲ್ಲಿ ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ಸ್ಫೋಟಗೊಂಡು ಬೆಂಕಿ ಹತ್ತಿದೆ.
Advertisement
ಸ್ಫೋಟದಿಂದ ದಟ್ಟವಾದ ಹೊಗೆ ಸುತ್ತಲೂ ವ್ಯಾಪಿಸಿ ಸ್ಥಳೀಯರಿಗೆ ಆತಂಕ ಉಂಟಾಯಿತು. ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಸ್ಫೋಟದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದೇ ರೀತಿಯ ಘಟನೆ ಇತ್ತೀಚೆಗೆ ಯಲಚೇನಹಳ್ಳಿಯ ಕಮರ್ಷಿಯಲ್ ಕಟ್ಟಡದಲ್ಲಿಯೂ ಸಂಭವಿಸಿ, ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿತ್ತು.
ಈ ಘಟನೆಗಳಿಂದ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸುರಕ್ಷತೆ ಕುರಿತಾಗಿ ಆತಂಕ ಹೆಚ್ಚಾಗಿದೆ.