ಬೆಂಗಳೂರು: ಮೊಬೈಲ್ ಪಿಕ್ ಪಾಕೆಟ್ ಮಾಡುತ್ತಿದ್ದ ಖದೀಮರ ಗ್ಯಾಂಗ್ ಅನ್ನು RMC ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಶುಬಿನ್, ಅಹ್ಮದ್, ಥೋಪಿಕ್ ಹಾಗೂ ಫೈಜಲ್ ಬಂಧಿತ ಆರೋಪಿಗಲಾಗಿದ್ದು, ಯಶವಂತಪುರ ಹೂವಿನ ಮಾರ್ಕೆಟ್ ಗೆ ಬಂದಿದ್ದ ಮಹಿಳೆಯ ಐ ಫೋನ್ 16 ಪ್ರೊ ಮೊಬೈಲ್ ಕದ್ದಿದ್ದರು. ನಂತರ ಮಹಿಳೆ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಐ 16 ಪ್ರೊ ಮೊಬೈಲ್ ನಲ್ಲಿ ಮೊಬೈಲ್ ಸ್ವಿಚ್ ಆಫ್ ಆದ್ರೂ ಲೊಕೇಷನ್ ಸಿಗುತ್ತೆ ಆದ್ದರಿಂದ ಇದನ್ನೇ ಫಾಲೋ ಮಾಡಿ ಹೋಗಿದ್ದ ಆರ್ ಎಂ ಸಿ ಯಾರ್ಡ್ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿ ವಿಚಾರಣೆ ವೇಳೆ ಮೊಬೈಲ್ ಪಿಕ್ ಪಾಕೆಟ್ ಜಾಲ ಪತ್ತೆಯಾಗಿದ್ದು, ಭದ್ರಾವತಿ ಮೂಲದ ಆರೋಪಿಗಳಿಂದ ನಡೆಯುತ್ತಿದ್ದ ಕೃತ್ಯ ಎಂಬುದು ಬೆಳಕಿಗೆ ಬಂದಿದೆ.
ಜಾತ್ರೆಗಳು , ಬಸ್, ಸೇರಿದಂತೆ ರಾಜ್ಯಾದ್ಯಂತ ನಡೆಯುವ ಹಲವು ಕಾರ್ಯಕ್ರಮಗಳಲ್ಲಿ ಈ ಆರೋಪಿಗಳು ಕೈಚಳಕ ತೋರಿದ್ದು, ಕದ್ದ ಮೊಬೈಲ್ ಗಳನ್ನ ಚೆನ್ನೈ ನಲ್ಲಿ ಮಾರಾಟ ಮಾಡುತ್ತಿದ್ದರು. ಒಂದು ವೇಳೆ ಮೊಬೈಲ್ ಲಾಕ್ ಓಪನ್ ಆಗಿಲ್ಲ ಅಂದ್ರೆ ಹೀಟರ್ ಮೆಷಿನ್ ಬಳಸಿ ಮೊಬೈಲ್ ಪಾರ್ಟ್ಸ್ ಬಿಚ್ಚಿ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿಸು ಬಂದಿದೆ.
ಬಂಧಿತರಿಂದ ಬರೋಬ್ಬರಿ 43 ಲಕ್ಷ ಮೌಲ್ಯದ 70 ಮೊಬೈಲ್ಗಳನ್ನ ವಶಕ್ಕೆ ಪಡೆಯಲಾಗಿದೆ. ಈ ಪೈಕಿ 70 ಮೊಬೈಲ್ ನಲ್ಲಿ 44 ಐ ಫೋನ್ ಗಳೇ ಆಗಿವೆ. ಕದ್ದ ಮೊಬೈಲ್ ಗಳನ್ನ 5 ರಿಂದ 6 ಸಾವಿರಕ್ಕೆ ಆರೋಪಿಗಳು ಮಾರಾಟ ಮಾಡುತ್ತಿದ್ದರಂತೆ. ಸದ್ಯ ಗ್ಯಾಂಗ್ನಲ್ಲಿ ನಾಲ್ವರು ಖದೀಮರು ಸಿಕ್ಕಿಬಿದ್ದಿದ್ದಾರೆ. ಇನ್ನೂ ಕಿಂಗ್ ಪಿನ್ ಗಳಾದ ಶ್ರೀನಿವಾಸ್ ಹಾಗೂ ನಾಗೇಶ್ ಪರಾರಿಯಾಗಿದ್ದಾರೆ. ಅವರಿಗೂ ಬಲೆ ಬೀಸಿರುವ ಆರ್ಎಂಸಿ ಯಾರ್ಡ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.