ಬೆಂಗಳೂರು ಕಂಬಳ: ಇಂದು ಕುದಿ ಕಂಬಳಕ್ಕೆ ಚಾಲನೆ

0
Spread the love

ಬೆಂಗಳೂರು:- ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳ -ನಮ್ಮ ಕಂಬಳದ ಪೂರ್ವಭಾವಿಯಾಗಿ ಬುಧವಾರ ಕುದಿ ಕಂಬಳಕ್ಕೆ ಚಾಲನೆ ಸಿಗಲಿದೆ. ಅಶ್ವಿ‌ನಿ ಪುನೀತ್‌ ರಾಜಕುಮಾರ್‌ ಅವರು ಬೆಳಗ್ಗೆ 10ಕ್ಕೆ ಅರಮನೆ ಮೈದಾನದ 5ನೇ ಗೇಟ್‌ನಲ್ಲಿ ನಿರ್ಮಿಸಲಾದ ಕಣದಲ್ಲಿ ಕುದಿ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ.

Advertisement

ಅರಮನೆ ಮೈದಾನದಲ್ಲಿ ಕಂಬಳದ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ವೇದಿಕೆ, ಆಸನ, ಪಾರ್ಕಿಂಗ್‌ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಂಬಳ ಸಮಿತಿ ಹಗಲಿರುಳು ಶ್ರಮಿಸುತ್ತಿದೆ. ಜತೆಗೆ ಸ್ಟಾಲ್‌ಗ‌ಳ ನೋಂದಣಿ ಕೆಲಸವು ಭರದಿಂದ ನಡೆಯುತ್ತಿದೆ.

ಕಂಬಳ ಸ್ಪರ್ಧಾಕೂಟ ಸಮೀಪಿಸುತ್ತಿದ್ದಂತೆ ಕುದಿ ಕಂಬಳ ಆಯೋಜಿಸಲಾಗುತ್ತದೆ. ಕರಾವಳಿಯಲ್ಲಿ ಸ್ಪರ್ಧೆ ನಡೆಯುವ ಒಂದು ತಿಂಗಳ ಮೊದಲು ಕುದಿ ಕಂಬಳ ಎಂಬ ಕೋಣಗಳ ಓಟದ ರಿಹರ್ಸಲ್‌ ಅಥವಾ ಓಟದ ತಾಲೀಮು ಮಾಡಲಾಗುತ್ತದೆ. ಈ ವೇಳೆ ಕೋಣಗಳಿಗೆ ಹುರಿದುಂಬಿಸುವ ಕೆಲಸವಾಗುತ್ತದೆ. ಅಂತೆಯೇ ಬೆಂಗಳೂರು ಕಂಬಳದ ಪೂರ್ವಭಾವಿಯಾಗಿ ಬುಧವಾರ ಮಂಗಳೂರಿನಿಂದ ಆಗಮಿಸಿದ ಎರಡು ಜೋಡಿ ಕೋಣಗಳು ಕುದಿ ಕಂಬಳದ ಟ್ರಯಲ್‌ಗೆ ಇಳಿಯಲಿದೆ.


Spread the love

LEAVE A REPLY

Please enter your comment!
Please enter your name here