ಬೆಂಗಳೂರು:- ಬನ್ನೇರುಘಟ್ಟದ ಜೈವಿಕ ಉದ್ಯಾನವನದಲ್ಲಿ ಸಫಾರಿ ವೇಳೆ ಚಿರತೆಯೊಂದು ಬಾಲಕನ ಮೇಲೆ ದಾಳಿ ಮಾಡಿದ ಘಟನೆ ಜರುಗಿದೆ.
Advertisement
13 ವರ್ಷದ ಬಾಲಕ ಪೋಷಕರ ಜೊತೆ ಸಫಾರಿಗೆ ತೆರಳಿದ್ದ. ಈ ವೇಳೆ ಚಿರತೆಯನ್ನು ನೋಡಿ ಚಾಲಕ ಬೊಲೆರೋ ನಿಲ್ಲಿಸಿದ್ದಾನೆ. ನಿಂತ ಕೆಲ ಕ್ಷಣದ ಬಳಿಕ ಬೊಲೆರೋ ಮುಂದಕ್ಕೆ ನಿಧಾನವಾಗಿ ಸಾಗಿದೆ. ಈ ವೇಳೆ ಬೊಲೆರೋ ಹಿಂಬಾಲಿಸಿದ ಚಿರತೆ ಕಿಟಕಿಯ ಮೂಲಕ ಕೈ ಹಾಕಿ ಉಗುರಿನಿಂದ ಪರಚಿದೆ. ಇದರಿಂದ ಗಾಯಗೊಂಡ ಗಾಯಾಳುಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಬಾಲಕ ಮನೆಗೆ ತೆರಳಿದ್ದಾನೆ.
ಚಿರತೆ ಬೊಲೆರೋ ಹತ್ತಿ ದಾಳಿ ನಡೆಸುತ್ತಿರುವ ದೃಶ್ಯ ಹಿಂಬದಿಯ ವಾಹನದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲಿನಲ್ಲಿ ಸೆರೆಯಾಗಿದೆ.