ಬೆಂಗಳೂರು:- ಬೆಂಗಳೂರು ಹಳದಿ ಮಾರ್ಗದ ಮೆಟ್ರೋ ನಿಲ್ದಾಣಗಳ ಸಮೀಪ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೊಸ ಬಸ್ ನಿಲ್ದಾಣ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಜೊತೆಗೆ, ಈಗಾಗಲೇ ಇದ್ದ ಕೆಲವು ಬಸ್ ನಿಲ್ದಾಣಗಳನ್ನು ಮೆಟ್ರೋ ನಿಲ್ದಾಣಗಳ ಸಮೀಪಕ್ಕೆ ಸ್ಥಳಾಂತರಿಸಲಾಗಿದೆ. ಬಯೋಕಾನ್ ಹೆಬ್ಬಗೋಡಿ, ಬೆರೆಟೇನ ಅಗ್ರಹಾರ, ಸಿಂಗಸಂದ್ರ, ಹೊಂಗಸಂದ್ರ, ಸೆಂಟ್ರಲ್ ಸಿಲ್ಕ್ ಬೋರ್ಡ್ ಹಾಗೂ ಆರ್.ವಿ. ರಸ್ತೆಯಲ್ಲಿ ಹೊಸ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ.
ಇದೇ ವೇಳೆ ಎಲೆಕ್ಟ್ರಾನಿಕ್ ಸಿಟಿ, ಹೊಸ ರಸ್ತೆ ಮತ್ತು ರಾಗಿಗುಡ್ಡ ಬಸ್ ನಿಲ್ದಾಣಗಳನ್ನು ಮೆಟ್ರೋ ನಿಲ್ದಾಣಗಳ ಬಳಿಗೆ ಸ್ಥಳಾಂತರಿಸಲಾಗಿದೆ. ಜಯದೇವ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಕುಡ್ಲು ಗೇಟ್ ಹಾಗೂ ಇನ್ಫೋಸಿಸ್ ಫೌಂಡೇಶನ್–ಕೊನ್ನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಗಳಲ್ಲಿ ಬಸ್ ನಿಲ್ದಾಣಗಳು ಈಗಾಗಲೇ 100 ಮೀಟರ್ ವ್ಯಾಪ್ತಿಯಲ್ಲೇ ಲಭ್ಯವಿವೆ.
ಆದರೆ ಹುಸ್ಕೂರು ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್–ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಲ್ಲಿ ಸ್ಥಳದ ಕೊರತೆಯಿಂದಾಗಿ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.



